ರಷ್ಯಾದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೊಡಗಿನ ಕುವರ!

Kodagi Spl Marriage
Published on

ಮಡಿಕೇರಿ: ಕೊಡಗು ಜಿಲ್ಲೆಯ ಯುವಕನೊಬ್ಬ ರಷ್ಯಾದ ಯುವತಿಯನ್ನು ಮದುವೆಯಾಗುವ ಮೂಲಕ ದೂರದ‌ ಸಂಬಂಧ ಬೆಳೆಸಿದ್ದಾರೆ.

ಇಂದು ನಡೆದ ಈ ಮದುವೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ ಸಾಕ್ಷಿಯಾಯಿತು. ಇಲ್ಲಿನ ನಂದಿಗುಂದ ಗ್ರಾಮದ ಎನ್.ಬಿ.ಚಿನ್ನಪ್ಪ ಹಾಗೂ ಪುಷ್ಪಾ ದಂಪತಿಯ ಪುತ್ರ ಎನ್.ಸಿ.ಜಯಚಂದನ್, ರಷ್ಯಾದ ಮಾಸ್ಕೋ ನಿವಾಸಿ ಮಿಲನಾ ಅವರನ್ನು ವರಿಸಿದ್ದಾರೆ.

ಜಯಚಂದನ್ ಕಳೆದ ಎಂಟು ವರ್ಷದಿಂದ ಮಾಸ್ಕೋದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಅದೇ ಯೋಗ ಕೇಂದ್ರದಲ್ಲಿ ಮಿಲನಾ ಉಚಿತ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಿಲನಾ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕುಟುಂಬದವರು, ಬಂದು ಬಳಗದವರು ಮದುವೆಗೆ ಆಗಮಿಸಿ ವಧುವರರನ್ನು ಹರಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net