ಮಡಿಕೇರಿಯೊಲ್ಲೊಬ್ಬ ವಿಕೃತಕಾಮಿ: ಮೃತದೇಹಗಳ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದೇ ಈತನ ಚಾಳಿ

Kaami
Published on

ಕೊಡಗು: ಮಡಿಕೇರಿಯ ಮಡಿಕಲ್​ ಕಾಲೇಜು ಆಸ್ಪತ್ರೆಯ ಡಿ ಗ್ರೂಪ್​ ನೌಕರನ ಕರಾಳ ಮುಖವಾಡವೊಂದು ಬಯಲಾಗಿದೆ. ನೌಕರನು ವಿಕೃತಕಾಮಿಯಾಗಿದ್ದು, ಮೃತರಾಗುವ ಯುವತಿ ಮತ್ತು ಯುವಕರ ಮೃತದೇಹದ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದು ಈತನ ಚಾಳಿಯಾಗಿತ್ತು.

ಆರೋಪಿ ನೌಕರನ ಹೆಸರು ಸೈಯದ್​. ಈತ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ. ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಇದೀಗ ಆತನ ಮೊಬೈನಲ್ಲಿದ್ದ ಎಲ್ಲ ವಿಡಿಯೋ ಮತ್ತು ಆಡಿಯೋ ಲಭ್ಯವಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಪರಾರಿಯಾಗಿದ್ದಾನೆ.

ಆರೋಪಿ ಸೈಯದ್​ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ನೇಮಕವಾಗಿದ್ದ. ಇದೀಗ ಆತನ ವಿರುದ್ಧ ಹಿಂದೂ ಜಾಗರಣ ವೇದಿಕೆ, ಮೆಡಿಕಲ್ ಕಾಲೇಜಿನ ಡೀನ್​ಗೆ ದೂರು ನೀಡಿದ್ದಾರೆ. ಬಳಿಕ ಮೆಡಿಕಲ್ ಕಾಲೇಜಿನ ಡೀನ್, ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net