ರಾಮಕೃಷ್ಣ ಶಾಲೆಯಲ್ಲಿ ಜ್ಞಾನ, ವಿಜ್ಞಾನ ಮತ್ತು ಸೃಜನಶೀಲ ದಿನಾಚರಣೆ

Ramakrishna School Creativity Day
ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಜ್ಞಾನ, ವಿಜ್ಞಾನ ಮತ್ತು ಸೃಜನಶೀಲ ದಿನಾಚರಣೆಯಲ್ಲಿ ಮಕ್ಕಳು ತಯಾರಿಸಿದ್ದ ಮಾದರಿಗಳನ್ನು ಕುವೆಂಪು ವಿವಿ ಸ್ನಾತಕೋತ್ತರ ಅಧ್ಯಯನಗಳು ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಕುಲಸಚಿವ ಪ್ರೊ. ಕೆ.ವಸಂತ್‌ಕುಮಾರ್ ಪೈ ವೀಕ್ಷಿಸಿದರು. ಡಾ.ಡಿ.ಆರ್.ನಾಗೇಶ್, ಶೋಭಾ ವೆಂಕಟರಮಣ, ತೀರ್ಥೇಶ್ ಇದ್ದರು.
Published on

ಶಿವಮೊಗ್ಗ: ಶ್ರಮ, ಶ್ರದ್ಧೆ, ಕಠಿಣ ಪರಿಶ್ರಮ ಬದುಕಿನಲ್ಲಿ ಎಲ್ಲರನ್ನೂ ದೃಢವಾಗಿ ನಿಲ್ಲುವಂತೆ ಮಾಡುತ್ತದೆ. ಸೃಜನಶೀಲತೆ ಬಳಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಕುವೆಂಪು ವಿವಿ ಸ್ನಾತಕೋತ್ತರ ಅಧ್ಯಯನಗಳು ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಕೆ.ವಸಂತ್‌ಕುಮಾರ್ ಪೈ ಹೇಳಿದರು.

ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ಜ್ಞಾನ, ವಿಜ್ಞಾನ ಮತ್ತು ಸೃಜನಶೀಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ಹೇಗೆ, ಏಕೆ, ಏನು ಎಂಬ ಪ್ರಶ್ನೆಗಳನ್ನು ಮೂಡುವಂತೆ ಮಾಡುವುದು ಉತ್ತಮ. ಇದರಿಂದ ಅವರಲ್ಲಿ ವಿಷಯದ ಆಳವಾದ ಜ್ಞಾನ ಮೂಡಲಿದೆ ಎಂದರು.

ನಾವು ನೋಡುವಂತೆ ವಸ್ತುಗಳನ್ನು ನಮ್ಮ ಆಲೋಚನೆಗೆ ತಕ್ಕಂತೆ ಬಳಸಿಕೊಳ್ಳಬೇಕು. ಹಿಂದಿನ ಎಲ್ಲ ಸಂಶೋಧನೆಗಳು ಏಕಾಏಕಿ ಆದಂತಹವು. ಆ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸಂಶೋಧನೆ ಕೈಗೊಂಡಿರುವುದನ್ನು ನಾವು ನೋಡಿದ್ದೇವೆ ಎಂದರು.

ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ. ಡಿ.ಆರ್.ನಾಗೇಶ್, ಮಕ್ಕಳ ಚಟುವಟಿಕೆ ಹಾಗೂ ಪ್ರದರ್ಶನಗಳನ್ನು ವೀಕ್ಷಿಸಿದರು. ಎಲ್ಕೆಜಿಯಿಂದ ಎಸ್‌ಎಸ್‌ಎಲ್ಸಿವರೆಗಿನ ಎಲ್ಲ ವಿದ್ಯಾರ್ಥಿಗಳು 6 ಸಾವಿರಕ್ಕೂ ಅಧಿಕ ಭಾಷಾವಾರು ಮಾದರಿಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು. ಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯ ಶಿಕ್ಷಕ ತೀರ್ಥೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net