

ಬೆಂಗಳೂರು:
ಮುಂಬಯಿ, ಹೈದರಾಬಾದ್ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಿಡಿತ ಸಾಧಿಸಿರುವ ಕೆಎಂಎ್ ಈಗ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಡಲು ಯೋಜನೆ ರೂಪಿಸಿಕೊಂಡಿದೆ.
ಕೆಎಂಎ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಿದ ದಾಖಲೆ ಬರೆದ ಕೆಎಂಎ್ಗೆ ಈಗ ಹೆಚ್ಚುವರಿ ಹಾಲನ್ನು ಉತ್ಪನ್ನಗಳನ್ನಾಗಿ ಪರಿವರ್ತನೆ ಮಾಡಿ ಮಾರಾಟ ಮಾಡುವ ಸವಾಲು ಎದುರಾಗಿದೆ. ಹಾಗಾಗಿ ಮಾರುಕಟ್ಟೆಯ ತನ್ನ ಜಾಲವನ್ನು ಇನ್ನಷ್ಟು ವಿಸ್ತಾರ ಮಾಡಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಲು ಕೆಎಂಎ್ ಮುಂದಾಗಿದೆ.
ತಿರುಪತಿಗೆ ಮತ್ತಷ್ಟು ನಂದಿನಿ ತುಪ್ಪ
ತಿರುಪತಿ ಲಡ್ಡು ತಯಾರಿಕೆಗಾಗಿ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 350 ಟನ್ ತುಪ್ಪವನ್ನು ಪೂರೈಕೆ ಮಾಡಲು ಕೆಎಂಎ್ ಟೆಂಡರ್ ಪಡೆದಿತ್ತು. ಈ ಟೆಂಡರ್‌ನಲ್ಲಿ ಈಗಾಗಲೇ 150 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎ್ ಪೂರೈಕೆ ಮಾಡಿದೆ. ಇನ್ನುಳಿದ ತುಪ್ಪವನ್ನು ಶೀಘ್ರವೇ ಪೂರೈಕೆ ಮಾಡಲಿದೆ. ಈ ನಡುವೆ ಟಿಟಿಡಿ ಮತ್ತೊಮ್ಮೆ 2 ಸಾವಿರ ಮೆಟ್ರಿಕ್ ಟನ್ ತುಪ್ಪ ಖರೀದಿಗೆ ಟೆಂಡರ್ ಕರೆದಿದೆ. ಈ ಟೆಂಡರ್‌ನಲ್ಲಿಯೂ ಭಾಗವಹಿಸಿ ತಿರುಪತಿಗೆ ತುಪ್ಪ ಸರಬರಾಜು ಮಾಡಲು ಕೆಎಂಎ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ತುಪ್ಪಕ್ಕೆ ಇನ್ನಷ್ಟು ಬೇಡಿಕೆ ನಿರೀಕ್ಷೆ
ಕೆಎಂಎ್ ತುಪ್ಪಕ್ಕೆ ಕ್ರಮೇಣ ಉತ್ತಮ ಬೇಡಿಕೆ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆಯೂ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾಗಲಿದ್ದು, ಬೆಲೆಯೂ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಕೆಎಂಎ್ಗಿದೆ.
*ಕೆಎಂಎ್ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಯ ಜಾಲವನ್ನು ವಿಸ್ತಾರ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆ ಅಂಗವಾಗಿ ದೆಹಲಿ ಮಾರುಕಟ್ಟೆಯಲ್ಲಿಯೂ ನಂದಿನಿ ಉತ್ಪನ್ನಗಳು ಪ್ರವೇಶಿಸಲಿವೆ.
-ಜಗದೀಶ್, ಎಂಡಿ, ಕೆಎಂಎ್.