ಶಂಕ್ರಣ್ಣ ಮುನವಳ್ಳಿ ಅವರಿಗೆ ಸನ್ಮಾನಿಸಿದ ಆಡಳಿತ ಮಂಡಳಿ

11-RNR-05
Published on

ರಾಣೆಬೆನ್ನೂರ: ಕೆಎಲ್​ಇ ಸಂಸ್ಥೆ ಬೃಹದಾಕಾರವಾಗಿ ಬೆಳೆಯಲು ಡಾ. ಪ್ರಭಾಕರ ಕೋರೆಯವರ ಶ್ರಮ ಅಪಾರವಾಗಿದ್ದು ಸ್ವಯಂ ಕೌಶಲದಿಂದ ಎಲ್ಲರೂ ಅಭಿವೃದ್ಧಿಯಾಗಬಹುದು ಎಂದು ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.

ರಾಜ್ಯ ಸರ್ಕಾರ ಅವರಿಗೆ ನೀಡಿರುವ ಸಹಕಾರ ರತ್ನ ಪ್ರಶಸ್ತಿ ನಿಮಿತ್ತ ನಗರದ ಕೆಎಲ್​ಇ ಸಂಸ್ಥೆಯ ರಾಜ ರಾಜೇಶ್ವರಿ ಕಾಲೇಜ್​ನಲ್ಲಿ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾಯಕದ ಮೂಲಕ ಗುರಿ ಮುಟ್ಟಬಹುದು. ಶಿಕ್ಷಕರು ಕೆಎಲ್​ಇ ಸಂಸ್ಥೆಯ ಆಧಾರಸ್ಥಂಬಗಳು ಹಾಗೂ ಎಲ್ಲರೂ ಶ್ರದ್ಧೆಯಿಂದ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಸ್ವಯಂ ಅಭಿವೃದ್ಧಿಯ ಜೊತೆಗೆ ಸಂಸ್ಥೆಯ ಏಳ್ಗೆಯನ್ನು ಬಯಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ ಮಾತನಾಡಿ, ಶಂಕ್ರಣ್ಣ ಮುನವಳ್ಳಿಯವರ ಸಹಕಾರ ಮನೋಭಾವನೆ ಮತ್ತು ತತ್ವ ಆದರ್ಶಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸದಸ್ಯರಾದ ವೀರಣ್ಣ ಅಂಗಡಿ, ಜಯಣ್ಣ ಜಂಬಗಿ, ವರ್ತಕರ ಸಂದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ರಾಜಣ್ಣ ಮೋಟಗಿ, ಪ್ರಾಚಾರ್ಯ ನಾರಾಯಣ ನಾಯಕ ಎ. ಹಾಗೂ ಸಿಬ್ಬಂದಿ ಇದ್ದರು.

ಉಪನ್ಯಾಸಕಿ ಚೇತನಾ ಹಿರೇಮಠ ಪ್ರಾಥಿರ್ಸಿದರು. ಶೋಭಾ ದೊಡ್ಡನಾಗಳ್ಳಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net