ಧಾನ ಧರ್ಮದ ಗುಣ ಮೈಗೂಡಿಸಿಕೊಳ್ಳಬೇಕು; ವಿ.ಪಿ. ಲಿಂಗನಗೌಡ್ರ

10-RNR-03
Published on

ರಾಣೆಬೆನ್ನೂರ: ಸಿರಸಂಗಿ ಲಿಂಗರಾಜರ ಧಾನ ಧರ್ಮದ ಗುಣಗಳನ್ನು ಪ್ರತಿಯೊಬ್ಬರೂ ಮೈ ಗೂಡಿಸಿಕೊಳ್ಳಬೇಕು ಎಂದು ಕೆಎಲ್‌ಇ ರಾಜ ರಾಜೇಶ್ವರಿ ವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣುಮಕ್ಕಳ ಸಂಯುಕ್ತ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ 163ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿರಸಂಗಿ ಲಿಂಗರಾಜರ ಜೀವನ ಚರಿತ್ರೆ ಕುರಿತು ಉಪನ್ಯಾಸಕ ಡಾ. ಚಂದ್ರಕಾಂತ ಆರ್.ಬಿ. ವಿಶೇಷ ಉಪನ್ಯಾಸ ನೀಡಿದರು.
ಸಂಸ್ಥೆಯ ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ, ಈರಣ್ಣ ಅಂಗಡಿ, ಪ್ರಾಚಾರ್ಯ ಡಾ. ನೀಲಕಂಠ ಮಾಗನೂರ, ಸಂಗೀತಾ ಕುಲಕರ್ಣಿ, ಆರ್.ಜಿ. ಕುರವತ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net