ಮಳೆಗೆ ಕುಸಿದ ರಸ್ತೆ ನಾಮಫಲಕ

07-kkr3(7-24 raste palaka
Published on

ಕಟ್ಟೆ ಆಂಜನೇಯ ದೇಗುಲ ಉದ್ಘಾಟನೆ ನಾಳೆ

  • ಕಿಕ್ಕೇರಿ : ಇಲ್ಲಿನ ರಾಜ್ಯ ಹೆದ್ದಾರಿ ಬಳಿ ಇರುವ ನಾಮಫಲಕ ಸೋಮವಾರ ತಡರಾತ್ರಿ ಸುರಿದ ಮಳೆಗೆ ಕುಸಿದಿದೆ. ಬಹಳ ಹಳೆಯದಾದ ಪ್ರವಾಸಿಮಂದಿರದ ಬಳಿ ಇದ್ದ ನಾಮಫಲಕ ವಾಹನ ಸವಾರರಿಗೆ, ದಾರಿಹೋಕರಿಗೆ ರಸ್ತೆಯ ಮಾರ್ಗಸೂಚಿಯಾಗಿತ್ತು. ರಾತ್ರಿ ವೇಳೆಯಲ್ಲಿ ಸುಲಭವಾಗಿ ರಸ್ತೆ ಸಾಗುವ ಮಾರ್ಗ ಗುರ್ತಿಸಿಕೊಂಡು ಸುಲಭವಾಗಿ ಸಾಗುತ್ತಿದ್ದರು. ಇಟ್ಟಿಗೆ, ಗಾರೆಯಿಂದ ನಿರ್ಮಿಸಲಾಗಿದ್ದ ನಾಮಫಲಕ ಕಳೆದ ವಾರ ಸುರಿದ ಮಳೆಗೆ ಅಲ್ಪಸ್ವಲ್ಪ ಕುಸಿತ ಕಂಡಿತ್ತು. ಮಂಗಳವಾರ ಸುರಿದ ಮಳೆಗೆ ಇಡೀ ಗೋಡೆಯ ನಾಮಫಲಕ ಕುಸಿದಿದೆ. ರಾತ್ರಿ ವೇಳೆ ಕುಸಿದಿರುವುದರಿಂದ ಯಾರಿಗೂ ತೊಂದರೆಯಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net