ಕಿರಣ್, ರೇಖಾ ಅವಿರೋಧ ಆಯ್ಕೆ

09 mar tnp 03
ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಿರಣ್, ಉಪಾಧ್ಯಕ್ಷರಾಗಿ ರೇಖಾ ಅವರು ಭಾನುವಾರ ಅವಿರೋಧವಾಗಿ ಆಯ್ಕೆಯಾದರು. ಸಿ.ಬಸವೇಗೌಡ, ಟಿ.ವಾಸುದೇವ್, ವಿಮಲ್ ಕುಮಾರ್, ಎನ್.ಎಸ್.ಶೇಖರ್ ಇತರರು ಇದ್ದರು.
Published on

ತಿ.ನರಸೀಪುರ : ತಾಲೂಕಿನ ರಂಗಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಿರಣ್, ಉಪಾಧ್ಯಕ್ಷರಾಗಿ ರೇಖಾ ಭಾನುವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದಲ್ಲಿರುವ ಸಹಕಾರಿ ಸಂಘದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಸಭೆಯನ್ನು ಕರೆಯಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ 12 ಜನ ನಿರ್ದೇಶಕರು ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಹಾಜರಿದ್ದು, ಅವಿರೋಧ ಆಯ್ಕೆಗೆ ಅನುಮೋದನೆ ನೀಡಿದರು. ಚುನಾವಣೆ ಅಧಿಕಾರಿಯಾಗಿ ವಿಮಲ್ ಕುಮಾರ್ ಕಾರ್ಯನಿರ್ವಹಿಸಿದರು. ಫಲಿತಾಂಶದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನಿರ್ದೇಶಕ ಟಿ.ವಾಸುದೇವ ಮಾತನಾಡಿ, ಸಂಘದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನಿರ್ದೇಶಕರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಗ್ರಾಮದ ಸಹಕಾರಿ ಬಂಧುಗಳು ಸಹಕರಿಸಿದ್ದಾರೆ. ಮುಂದಿನ ಎರಡು ವರ್ಷದೊಳಗಿನ ಸಂಘದ ಸುವರ್ಣ ಮಹೋತ್ಸವವನ್ನು ಆಚರಿಸಿ, ನೆನಪಿಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು. ಯುವಕರಿಗೆ ಅವಕಾಶ ಮಾಡಿಕೊಡಲು ಕಿರಣ್ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಸಿ. ಬಸವೇಗೌಡ, ಸಿದ್ದರಾಜು, ಮಂಜು, ರತ್ನಮ್ಮ, ಜವರಯ್ಯ, ಕಲ್ಯಾಣಮ್ಮ, ಗೋಪಾಲ, ರೇವಣ್ಣ, ಎ.ಎಸ್. ಚಂದ್ರಶೇಖರ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಿಕ್ಕರೇವಣ್ಣ, ಮಾಜಿ ತಾ.ಪಂ ಸದಸ್ಯ ಮರೀದೇವೇಗೌಡ, ಮುಖಂಡರಾದ ಹಿಟ್ಟುವಳ್ಳಿ ಪ್ರಭುಸ್ವಾಮಿ, ಮೇಲ್ವಿಚಾರಕ ಮಂಜೇಶ್ ಗೌಡ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಎನ್.ಎಸ್. ಶೇಖರ್, ವರುಣ ಬ್ಲಾಕ್ ಆದ್ರೆ ಉಪಾಧ್ಯಕ್ಷ ನಾರಾಯಣ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net