

India: ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ಎರಡು ದಾಳಿಗಳಲ್ಲಿ ಐದು ಪತ್ರಕರ್ತರ ಹತ್ಯೆಯನ್ನು ಭಾರತ ಬುಧವಾರ (ಆಗಸ್ಟ್, 27) ಆಘಾತಕಾರಿ ಮತ್ತು ಎಂದು ಬಣ್ಣಿಸಿದೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತವು ಯಾವಾಗಲೂ ಸಂಘರ್ಷದಲ್ಲಿ ನಾಗರಿಕರ ಜೀವಹಾನಿಯನ್ನು ಖಂಡಿಸಿದೆ. ಇಸ್ರೇಲಿ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ ಎಂದು ನಮಗೆ ಅರ್ಥವಾಗಿದೆ ಎಂದು ಹೇಳಿದರು.
ಗಾಜಾದ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ ಎರಡು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಹುಸಮ್ ಅಲ್-ಮಸ್ರಿ, ಮರಿಯಮ್ ಅಬು ದಗ್ಗಾ, ಮೋಜ್ ಅಬು ತಹಾ, ಮೊಹಮ್ಮದ್ ಸಲಾಮಾ ಮತ್ತು ಅಹ್ಮದ್ ಅಬು ಅಜೀಜ್ ಕೊಲ್ಲಲ್ಪಟ್ಟ ಪತ್ರಕರ್ತರು. ಇವರು ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸೋಮವಾರ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಕನಿಷ್ಠ 20 ಜನರಲ್ಲಿ 5 ಪತ್ರಕರ್ತರು ಸೇರಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧವು ಮಾಧ್ಯಮ ಕಾರ್ಯಕರ್ತರಿಗೆ ಅತ್ಯಂತ ರಕ್ತಸಿಕ್ತ ಸಂಘರ್ಷಗಳಲ್ಲಿ ಒಂದಾಗಿದೆ, 22 ತಿಂಗಳ ಸಂಘರ್ಷದಲ್ಲಿ ಗಾಜಾದಲ್ಲಿ ಕನಿಷ್ಠ 192 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿ ತಿಳಿಸಿದೆ. (ಏಜೆನ್ಸೀಸ್)