ಎನ್‌ಎಚ್ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿ

NH Hospital Kidney Transplant
Published on

ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ (ಮೂತ್ರ ಪಿಂಡ ಕಸಿ) ಮಾಡಲಾಗಿದೆ ಎಂದು ಆಸ್ಪತ್ರೆಯ ನೆಫ್ರೋಲಜಿಸ್ಟ್ ಡಾ. ಮೊಹಮ್ಮದ್ ಇಮ್ರಾನ್ ಹೇಳಿದರು.

ಸಹ್ಯಾದ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆ ಮಾಡುವಲ್ಲಿ ನಮ್ಮ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಕಿಡ್ನಿ ವೈಲ್ಯದಿಂದ ಬಳಲುತ್ತಿದ್ದ 20 ವರ್ಷದ ಯುವಕನಿಗೆ ಕಿಡ್ನಿ ಕಸಿ ಅಗತ್ಯವಿತ್ತು. ನಿಯಮಗಳನ್ನು ಅನುಸರಿಸಿ ಆತನ ತಂದೆಯ ಕಿಡ್ನಿಯನ್ನೇ ಪಡೆದು ಯಶಸ್ವಿಯಾಗಿ ಶಸಚಿಕಿತ್ಸೆ ಮಾಡಲಾಗಿದೆ. ಈಗ ಕಿಡ್ನಿ ನೀಡಿದ ತಂದೆ ಮತ್ತು ಅಳವಡಿಸಿಕೊಂಡ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇತ್ತೀಚೆಗೆ ಈ ಕಿಡ್ನಿ ಕಾಯಿಲೆ ಹೆಚ್ಚಾಗುತ್ತಿದೆ. ದಾನ ಮಾಡುವವರ ಸಂಖ್ಯೆ ಕೂಡ ಕಡಿಮೆ ಇದೆ. ಕಿಡ್ನಿದಾನ ಪಡೆಯುವಾಗ ಅನೇಕ ನಿಯಮಗಳಿವೆ. ಇದು ಯಾವುದೇ ರೀತಿಯಿಂದಲೂ ವ್ಯವಹಾರಕ್ಕೆ ಒಳಗಾಗಬಾರದೆಂಬ ಹಿನ್ನಲೆಯಲ್ಲಿ ಸರ್ಕಾರ ನೀತಿಯನ್ನು ರೂಪಿಸಿದೆ. ಆಸ್ಪತ್ರೆಯ ಒಂದು ಸಮಿತಿ ಇದನ್ನು ಗಮನಿಸಿ ದಾನಿಗಳಿಂದ ಕಿಡ್ನಿ ಪಡೆದು ಶಸ್ತ್ರಚಿಕ್ಸಿೆ ಮಾಡುತ್ತದೆ ಎಂದರು.

ಸಾಮಾನ್ಯವಾಗಿ ಎರಡು ಮೂತ್ರ ಪಿಂಡವಿರುವ 20ರಿಂದ 60 ವರ್ಷದೊಳಗಿನ ಆರೋಗ್ಯವಂತರು ಕಿಡ್ನಿದಾನ ಮಾಡಬಹುದು. ಸಂಬಂಧಿಗಳೇ ಕಿಡ್ನಿದಾನ ಮಾಡಿದರೆ ಶಸಚಿಕಿತ್ಸೆ ಅತ್ಯಂತ ಯಶಸ್ವಿಯಾಗುತ್ತದೆ ಎಂದರು.

ನೆಫ್ರೋಲಜಿಸ್ಟ್ ಡಾ. ಕೆ.ಆರ್.ರವಿ, ಯುರಾಲಜಿಸ್ಟ್‌ಗಳಾದ ಡಾ. ಯು.ಕೆ.ಅವಿನಾಶ್, ಡಾ. ಪ್ರಭುಲಿಂಗ ಕಣ್ಣೂರು, ಅರವಳಿಕೆ ತಜ್ಞ ಡಾ. ಚಕ್ರವರ್ತಿ ಸಂಡೂರ್, ವ್ಯವಸ್ಥಾಪಕ ನಿರ್ದೇಶಕ ಡಾ. ವರ್ಗಿಸ್ ಪಿ. ಜಾನ್, ಮಾರುಕಟ್ಟೆ ಮುಖ್ಯಸ್ಥ ಎಸ್.ವಿ.ರಾಜಾಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net