ಹೊಟ್ಟೆ ಹಸಿವು ಎಂದು ಅಪ್ಪನ ಮೊಬೈಲ್​ನಿಂದ 100 ಬೌಲ್​ ನೂಡಲ್ಸ್​ ಆರ್ಡರ್ ಮಾಡಿದ ಪುಟಾಣಿ! ಮುಂದಾಗಿದ್ದೇನು?

noodles
Published on

ಬೀಜಿಂಗ್: ಈಗೆಲ್ಲ ಟೆಕ್ನಿಕಲ್ ಯುಗ. ಈಗಿನ ಮಕ್ಕಳಂತೂ ಹುಟ್ಟುತ್ತಲೇ ಮೊಬೈಲ್ ಬಳಕೆ ಕಲಿತು ಬಂದಿರುತ್ತವೆಯೇನೋ ಎನ್ನುವಂತೆ ವರ್ತಿಸಲಾರಂಭಿಸಿದ್ದಾರೆ. ಅದೇ ರೀತಿ ಮೂರು ವರ್ಷದ ಪುಟಾಣಿಯೊಬ್ಬಳು ತಂದೆಯ ಮೊಬೈಲ್​ನಿಂದ ನೂಡಲ್ಸ್​ ಆರ್ಡರ್​ ಮಾಡಿ ಅಪ್ಪ ಅಮ್ಮನನ್ನೇ ಪೇಚಿಗೆ ಸಿಲುಕಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಜಿಲಿನ್ ಹೆಸರಿನ ನಗರದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಹೊಟ್ಟೆ ಹಸಿವು ಎಂದು ಆನ್​ಲೈನ್​ನಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದಾಳೆ. ಅಪ್ಪನ ಮೊಬೈಲ್​ನಲ್ಲಿದ್ದ ಆ್ಯಪ್​ ಮೂಲಕ ಆರ್ಡರ್​ ಮಾಡಿದ್ದಾಳೆ. ಸ್ವಲ್ಪ ಸಮಯದಲ್ಲಿ ಡೆಲಿವರಿ ಬಾಯ್ ಮನೆ ಅಪಾರ್ಟ್​ಮೆಂಟ್​ ಬಳಿ ಬಂದಿದ್ದು, ಬರೋಬ್ಬರಿ ಏಳು ಬಾರಿ 13ನೇ ಫ್ಲೋರ್​ನ ಮನೆವರೆಗೆ ಹತ್ತಿಳಿದು ನೂಡಲ್ಸ್​ ಕೊಟ್ಟಿದ್ದಾನೆ.

ಮೊದಲಿಗೆ ಅದನ್ನು ಯಾವುದೋ ಆಫರ್ ಇರಬೇಕು ಎಂದು ಭಾವಿಸಿದ ಬಾಲಕಿಯ ತಂದೆಗೆ ಆಮೇಲೆ ಮಗಳು ಮಾಡಿದ ಕಿತಾಪತಿ ಗೊತ್ತಾಗಿದೆ. ಏಕಾಗಿ ಮಾಡಿದೆ ಎಂದು ಕೇಳಿದಾಗ ನನಗೆ ಹಸಿವಾಗಿತ್ತು ಎಂದು ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆ ನೂಡಲ್ಸ್​ ಬೌಲ್ಸ್​ಗಳನ್ನು ಇಟ್ಟುಕೊಳ್ಳಲು ಪೂರ್ತಿ ಕೋಣೆಯೇ ಬೇಕಾಗಿದ್ದಾಗಿ ಬಾಲಕಿಯ ತಂದೆ ತಿಳಿಸಿದ್ದಾನೆ. ನಂತರ ಕೇವಲ 8 ಬೌಲ್​ಗಳನ್ನು ಮನೆಯಲ್ಲಿಟ್ಟುಕೊಂಡು ಉಳಿದದ್ದನ್ನು ಬಡವರಿಗೆ ಹಂಚಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net