'ಕಿಚ್ಚ' ಸುದೀಪ್ ಚಿಕ್ಕಪ್ಪನ ಕಥೆ ಕೇಳಿ ಬದಲಾಯ್ತು ಬಿಗ್​ಬಾಸ್​​ ಸ್ಪರ್ಧಿಗಳ ಆಟ! Kiccha Sudeep

sudeep
Published on

ಬೆಂಗಳೂರು: ( Kiccha Sudeep)  ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ ಕನ್ನಡ ಸೀಸನ್ 12 (Bigg Boss Kannada) ವೀಕ್ಷಕರು ಮೆಚ್ಚಿದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದ ನಿರೂಪಣೆ ಹೊತ್ತಿರುವ ಕಿಚ್ಚ ಸುದೀಪ್ ಅವರು ತರಲೆ, ತಮಾಷೆ, ಜಗಳ, ಮೂದಲಿಕೆ, ಗೇಮ್​​ ಎಂದು ವಾರ ಕಳೆಯುವ ಒಂಟಿ ಮನೆಯ ಸ್ಪರ್ಧಿಗಳಿಗೆ ವಾರಾಂತ್ಯದಲ್ಲಿ ಬಂದು ತಪ್ಪು ಮಾಡಿದ ಸ್ಪರ್ಧಿಗಳಿಗೆ ಯಥಾವತ್ತು ಸುದೀಪ್​ ಮಾತಿನ ಚಾಟಿ ಬೀಸುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಜಾರಿ ಮಾಡಿದರೆ, ಅದನ್ನು ಎಲ್ಲರೂ ತಪ್ಪದೇ ಫಾಲೋ ಮಾಡಬೇಕು. ಆದರೆ ಸ್ಪರ್ಧಿಗಳು ಒಮ್ಮೊಮ್ಮೆ ಅದನ್ನು ಸರಿಯಾಗಿ ಪಾಲಿಸುವುದಿಲ್ಲ. ರೂಲ್ಸ್​​ ಬ್ರೇಕ್​ ಮಾಡ್ತಾರೆ. ಇದೆಲ್ಲವನ್ನು ಇಟ್ಟುಕೊಂಡು ಕಿಚ್ಚ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಎನ್ನುವುದು ನಮಗೆ ಗೊತ್ತಿರುವ ವಿಚಾರ.

ಶನಿವಾರ (ಅ.01) ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್​ ಅವರು ಹೇಗೆ ಕ್ಲಾಸ್​ ತಗೋತಾರೆ? ಯಾರದ್ದು ತಪ್ಪು-ಸರಿ ಎಂದು ಹೇಳ್ತಾರೆ ಎಂದು ವೀಕ್ಷಕರು ಅಪಾರ ನಿರೀಕ್ಷೆಯಲ್ಲಿದ್ದರು. ಆದರೆ, ಸುದೀಪ್​ ಅವರಿಂದ ನೋಡುಗರು ನಿರೀಕ್ಷಿಸಿದ ಉತ್ತರ ಸಿಗದೆ ಇರುವುದು ಮತ್ತು ಕೆಲವು ವಿಷಯಗಳು ಚರ್ಚೆಯಾಗದ ಹಿನ್ನೆಲೆ ಕೆಲವು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್​ ಅವರ ಪಂಚಾಯಿತಿಯಿಂದ ಒಂದಷ್ಟು ವೀಕ್ಷಕರಿಗೆ ತೀವ್ರ ಅಸಮಾಧಾನ ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಬಿಗ್​ಬಾಸ್​​ನ ಕೆಲವು​ ವೀಕ್ಷಕರು ಹೇಳುವುದೇ ಬೇರೆ....

ಈ ಹಿಂದಿನ ಸೀಸನ್​ಗಳಲ್ಲಿ ಸ್ಪರ್ಧಿಗಳಿಗೆ ನೇರವಾಗಿ ಖಡಕ್ ವಾರ್ನಿಂಗ್​ ಕೊಟ್ಟು ಕಿವಿ ಹಿಂಡಿ ಮಾತು ಹೇಳುತ್ತಿದ್ದ ಕಿಚ್ಚ ತನ್ನ ವರಸೆ ಬದಲಿಸಿಕೊಂಡಿರುವುದು ಖಂಡಿತ ಹೌದು. ಹೊಸ ಸೀಸನ್​ಗೆ ಹೊಸ ಮಾರ್ಗ ಕಂಡುಕೊಂಡಿರುವ ಕಿಚ್ಚ ಚಿಕ್ಕಪ್ಪನ ಕಥೆ ಹೇಳುವ ಮೂಲಕ ಸ್ಪರ್ಧಿಗಳಿಗೆ ಕಿವಿಮಾತು ಹೇಳುತ್ತಿದ್ದಾರೆ. ಇದು ಸ್ಪರ್ಧಿಗಳಿಗೆ ಬುದ್ಧಿ ಹೇಳಿದಾಗೂ ಇರಬೇಕು. ಹೊರಗೆ ಕೂತು ನೋಡುತ್ತಿರುವ ವೀಕ್ಷಕರ ಗೊಂದಲಕ್ಕೂ ಉತ್ತರನೂ ಸಿಗಬೇಕು.. ಆಟದ ಶೈಲಿ ಕೂಡಾ ಬದಲಾಗಬೇಕು ಹಾಗೇ ಕಿಚ್ಚನ ನೀತಿ ಪಾಠ ಇರುತ್ತದೆ ಎನ್ನುವುದು ಕೂಡಾ ನೆಟ್ಟಿಗರ ಅಭಿಪ್ರಾಯವಾಗಿದೆ.

ಕಿಚ್ಚ ಯಾವ ರೀತಿ ಕ್ಲಾಸ್​​ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದರೆ (ಅ.01) ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ 'ನಿಮ್ಮಲ್ಲಿ ಎಲ್ಲರಿಗೂ ವ್ಯಕ್ತಿತ್ವಗಳ ಪ್ರಾಬ್ಲಂ ಇದೆ, ಫೇಕ್ ಇದೆ. ನಿಮ್ಮಗಳ ಮಧ್ಯೆ ತುಂಬಾ ಮಾತುಕತೆ ನಡೆಯುತ್ತೆ. ಅಲ್ವಾ? ಮೊದಲ ಬಾರಿಗೆ ನಾನು ಟಾಸ್ಕ್‌ ಅನ್ನು ಕೊಡುತ್ತೇನೆ. ಮುಂದಿನ ವಾರ ಬಿಗ್ ಬಾಸ್ ಯಾವ ಟಾಸ್ಕನ್ನು ಕೊಡಲ್ಲ. ಇಡೀ ಮನೆಗೆ ಇಡೀ ವಾರ ಟಾಸ್ಕೇ ಇಲ್ಲ. ಇಡೀ ಮನೆಯನ್ನು ನಾನೇ ನಾಮಿನೇಟ್ ಮಾಡುತ್ತಿದ್ದೇನೆ. ಯಾರು ಮನೆಲಿ ಇರಬೇಕು ಎನ್ನುವ ನಿರ್ಧಾರವನ್ನು ಜನರೇ ಮಾಡಲಿ ಎಂದು ಎಲ್ಲಾ ಸ್ಪರ್ಧಿಗಳಿಗೂ ಸುದೀಪ್ ಹೇಳಿದ್ದಾರೆ. ಹೀಗೆ ಸುದೀಪ್ ಅವರು ನೇರಾನೇರವಾಗಿ ನಿರ್ಧಾರ ತೆಗೆದುಕೊಂಡಿದ್ದು ಕೂಡಾ ಇದೆ.

ಕಿಚ್ಚನ ವಾರ್ನಿಂಗ್​ಗೆ ಜಾನ್ವಿ ಜಾಗೃತ! ನೆಗೆಟಿವ್ ಶೇಡ್​ನಿಂದ ಹೊರ ಬಂದ ಜಾನ್ವಿ!

ಬಿಗ್​ಬಾಸ್​​ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಈ ಇಬ್ಬರೂ ಸೇರಿಕೊಂಡು ರಕ್ಷಿತಾ ಶೆಟ್ಟಿಗೆ ತೊಂದರೆ ಕೊಟ್ಟಿದ್ದನ್ನ ನೋಡಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲವನ್ನು ಗಮನಿಸಿದ್ದ ಸುದೀಪ್ ಅವರು ಜಾನ್ವಿಗೆ ಪಾಠ ಹೇಳಿದರು. ಈಗ ಇವರು ಬೇರೆಯಾಗಿ ತಮ್ಮದೇ ಶೈಲಿಯಲ್ಲಿ ಗೇಮ್​​ ಆಡುತ್ತಿದ್ದಾರೆ.

ಜಾನ್ವಿ ನೆಗೆಟಿವ್ ಶೇಡ್​ನಿಂದ ಹೊರಕ್ಕೆ ಬಂದಿದ್ದಾರೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಇತರ ಸ್ಪರ್ಧಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಇಬ್ಬರು ಆಟ ಬದಲಿಸಲು ಕಾರಣವಾಗಿದ್ದೆ ಕಿಚ್ಚನ ಪಾಠ ಎನ್ನುವ ಮಾತನ್ನು ವೀಕ್ಷಕರು ಹೇಳುತ್ತಿದ್ದಾರೆ. ಜಾನ್ವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಮಾತುಗಳನ್ನು ನೀವು ಕಾಣಬಹುದು.

ಕಿಚ್ಚನ ಪಾಠದಿಂದ ಬದಲಾಯ್ತು ಸೂರಜ್ ಆಟ!

ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸೂರಜ್​ ಮೊದಲ ದಿನದಿಂದಲೇ ರಾಶಿಕಾ ಜೊತೆ ಸ್ನೇಹ ಬೆಳಸಿಕೊಂಡಿದ್ದರು. ಇಬ್ಬರೂ ಕೈ ಕೈ ಹಿಡಿದು ಸುತ್ತಾಡಲು ಆರಂಭಿಸಿದರು. ಇವರ ಜೋಡಿ ನೋಡಿ ಅನೇಕರಿಗೆ ಅಸಮಾಧಾನ ಮೂಡಿತ್ತು. ಸುದೀಪ್ ಕೂಡ ವೇದಿಕೆ ಮೇಲೆ ಈ ವಿಚಾರವನ್ನು ಸೂಕ್ಷ್ಮವಾಗಿ ಹೇಳಿದ್ದರು. ಇದನ್ನು ಅರ್ಥೈಸಿಕೊಂಡ ಇಬ್ಬರು ಸ್ಪರ್ಧಿಗಳು ನಾವು ಜಸ್ಟ್ ಫ್ರೆಂಡ್ಸ್ ಎಂದು ತಮ್ಮ ಆಟದ ವರಸೆ ಬದಲಿಸಿಕೊಂಡಿದ್ದಾರೆ.

ಹೀಗೆ ಕಿಚ್ಚನ ಮಾತನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡ ಸ್ಪರ್ಧಿಗಳು ಒಂಟಿಯಾಗಿ ಆಡುತ್ತಿದ್ದಾರೆ. ದೊಡ್ಡಮನೆಯಲ್ಲಿರುವ ಸ್ಪರ್ಧಿಗಳಿಗೆ 'ವಾರದ ಕಥೆ ಕಿಚ್ಚನ ಜೊತೆ’ ವಾರಾಂತ್ಯದ ಸಂಚಿಕೆ ಒಂದು ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ ಹಾಗೂ ಆಟದ ಶೈಲಿ ಬದಲಾಗೋದು ಖಂಡಿತ ಹೌದು. ಪ್ರತಿನಿತ್ಯ ಬಿಗ್​ಬಾಸ್​ ವೀಕ್ಷಿಸುವವರು ಪರ ಹಾಗೂ ವಿರೋಧ ಚರ್ಚೆ ನಡೆಸುವುದು ಕೂಡಾ ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net