

ರಾಣೆಬೆನ್ನೂರ: ಭೂಮಿ ಮೇಲೆ ಹೆಚ್ಚಳ ಆಗುತ್ತಿರುವ ಉಷ್ಣಾಂಶ ತಗ್ಗಿಸಲು ಸಸಿ ನೆಟ್ಟು ಅವುಗಳನ್ನು ಪೋಷಣೆ ಮಾಡುವುದೊಂದೆ ದಾರಿ ಎಂದು ಖನ್ನೂರ ವಿದ್ಯಾನಿಕೇತನ ಶಾಲೆಯ ಚೇರ್ಮನ್ ಡಾ. ಪ್ರವೀಣ ಖನ್ನೂರ ಹೇಳಿದರು.
ನಗರದ ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಜಾಗೃತಿ ಕುರಿತು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು. ಪರಿಸರ ಜಾಗೃತಿಗಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆದವು.
ಸಂಸ್ಥೆಯ ಸಿಇಒ ಡಾ. ಶೈಲಶ್ರೀ ಖನ್ನೂರ ಅಧ್ಯಕ್ಷತೆ ವಹಿಸಿದ್ದರು.
ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಶಾಲೆಯ ಪ್ರಾಚಾರ್ಯ ಮನೀಶ ಅರಿಂಬಿಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.