ಚೆಸ್ ಟೂರ್ನಾಮೆಂಟ್‌ನಲ್ಲಿ ಪ್ರಜ್ವಲ ಪ್ರಥಮ

11-RNR-07
Published on

ರಾಣೆಬೆನ್ನೂರ: ಇಲ್ಲಿಯ ಖನ್ನೂರ ವಿದ್ಯಾನಿಕೇತನ ಸ್ಕೂಲ್ ವತಿಯಿಂದ ಇತ್ತೀಚೆಗೆ ದಿ. ಮಹದೇವಪ್ಪ ಖನ್ನೂರ ಇವರ ಸ್ಮರಣಾರ್ಥವಾಗಿ 2ನೇ ಬಾರಿ ಓಪನ್ ರ‌್ಯಾಪಿಡ್ ಚೆಸ್ ಟೂರ್ನಾಮೆಂಟ್ ನಡೆಯಿತು.
ಪಂದ್ಯದಲ್ಲಿ ಜೆಎಸ್‌ಎಸ್ ಮೆಡಿಕಲ್ ಕಾಲೇಜ್‌ನ ವಿದ್ಯಾರ್ಥಿ ಪ್ರಜ್ವಲ ಪ್ರಥಮ ಸ್ಥಾನ, ಆಂಧ್ರಪ್ರದೇಶದ ದುಲಿಪಾಲ್ ಚಂದ್ರಪ್ರಸಾದ ದ್ವಿತೀಯ, ಶಿವಮೊಗ್ಗದ ಚಿರಂತ ತೃತೀಯ ಸ್ಥಾನ ಪಡೆದುಕೊಂಡರು. ಬೆಸ್ಟ್ ಹಾವೇರಿ ವಿಭಾಗದಲ್ಲಿ ಮಹಲಿಂಗಪ್ಪ ಎನ್.ಸಿ. ಹಾಗೂ ಮಹೇಶ ಜೆ. ಆಯ್ಕೆಯಾದರು. ಬೆಸ್ಟ್ ರಾಣೆಬೆನ್ನೂರ ವಿಭಾಗದಲ್ಲಿ ಚೇತನ ಎಂ.ಕೆ. ಹಾಗೂ ಶ್ರೇಯಸ್ ಶೀಲವಂತರ ಆಯ್ಕೆಯಾದರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಸುಲೋಚನ ಖನ್ನೂರ, ಚೇರ್ಮನ್ ಡಾ. ಪ್ರವೀಣ ಖನ್ನೂರ ಹಾಗೂ ಸಿಇಓ ಡಾ. ಶೈಲಶ್ರೀ ಖನ್ನೂರ, ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಶಾಲೆಯ ಪ್ರಾಚಾರ್ಯ ಮನೀಶ ಅರಿಂಬಿಲ್, ಕಾಲೇಜ್ ಪ್ರಾಂಶುಪಾಲ ಕಟಕಮ್ ಸುಬ್ಬಾರಾವ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net