ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು; ಡಾ. ಪ್ರವಿಣ

oplus_0
oplus_0
Published on

ರಾಣೆಬೆನ್ನೂರ: ಶಾಲಾ ಮಕ್ಕಳು ಸಮಾಜದ ಏಳಿಗೆಯಾಗುವ ದೃಷ್ಟಿಯಿಂದ ಗುಣಮಟ್ಟದ ವಿದ್ಯಾಭ್ಯಾಸ ಹೊಂದಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಖನ್ನೂರ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಡಾ. ಪ್ರವಿಣ ಖನ್ನೂರ ಹೇಳಿದರು.

ಇಲ್ಲಿಯ ವಿನಾಯಕ ನಗರದ ಖನ್ನೂರ ವಿದ್ಯಾನಿಕೇತನ ಪ್ಲೇ ಹೋಮ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ಮಾತಿದೆ. ಅದರಂತೆ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಿ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆಯಾಗಿ ಕೊಡಬೇಕು. ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಕಲಿಸುವ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಕ್ರೀಯವಾಗಿ ಪಾಲ್ಗೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಆಚಾರ್ಯ ವಿಕ್ರಮ್​ ಭಟ್​ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಶಿಕ್ಷಣ ಸಂಸ್ಥೆ ಕಾರ್ಯದಶಿರ್ ಡಾ. ಶೈಲಜಾ ಖನ್ನೂರ, ಆಡಳಿತಾಧಿಕಾರಿ ನಾಗೇಶ ಮರಡೆಣ್ಣನವರ, ಮುಖ್ಯಶಿಕ್ಷಕಿ ಬೈರಿಲ್​, ಪ್ಲೇ ಹೋಮ್​ನ ಮುಖ್ಯಸ್ಥೆ ಮೌನಶ್ರೀ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net