

ಶಿಮ್ಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭಾ ಆವರಣದ ಗೇಟ್ ಮೇಲೆ ಖಲಿಸ್ತಾನ ಧ್ವಜ ಹಾಕಲಾಗಿದೆ ಮತ್ತು ಕಾಂಪೌಂಡ್ ಮೇಲೆ ಖಲಿಸ್ತಾನ ಪರ ಘೋಷಣೆ, ಚಿತ್ರಗಳನ್ನು ಗೀಚಲಾಗಿದೆೆ. ಇದು ಪಂಜಾಬ್ನ ಬಂಡುಕೋರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕೃತ್ಯವನ್ನು ತೀಕ್ಷ$$$$್ಣವಾಗಿ ಖಂಡಿಸಿರುವ ಮುಖ್ಯಮಂತ್ರಿ ಜೈರಾಂ ಠಾಕೂರ್, ಈ ಬಗ್ಗೆ ವಿಸತ ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯದ ಗಡಿಯಲ್ಲಿನ ಭದ್ರತೆ, ಜನರ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ಇರಿಸಲಾಗಿದೆ. ಪ್ರವಾಸಿಗರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎಂದು ಸಿಎಂ ಠಾಕೂರ್ ಭರವಸೆ ನೀಡಿದ್ದಾರೆ. ಧರ್ಮಶಾಲಾದಲ್ಲಿರುವ ವಿಧಾನಸಭಾ ಕಟ್ಟಡದಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುತ್ತದೆ. ಉಳಿದ ಸಮಯದಲ್ಲಿ ಈ ಕಟ್ಟಡಕ್ಕೆ ಅಗತ್ಯದಷ್ಟು ಮಾತ್ರ ಭದ್ರತೆ ಇರುತ್ತದೆ. ಪ್ರಸ್ತುತ ವಿಧಾನಸಭಾ ಕಟ್ಟಡದ ಒಳಆವರಣದಲ್ಲಿ ಪೊಲೀಸರು ಇದ್ದರು. ಹೊರ ಆವರಣದಲ್ಲಿ ಇರಲಿಲ್ಲ. ಪರಿಸ್ಥಿತಿಯ ದುರ್ಲಾಭ ಪಡೆದು ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ. ಬಂಡುಕೋರರ ಹಿಂದಿರುವ ರಾಜಕೀಯ ಚಿಂತನೆಯನ್ನು ರಾಜ್ಯದ ಜನತೆ ಗಮನಿಸುತ್ತಿದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹಿಮಾಚಲ ಪ್ರದೇಶ ಬಿಜೆಪಿ ಟಕ ಹೇಳಿದೆ. ಹಿಮಾಚಲದವರಾದ ನಾವು ಭಾರತೀಯರು ಇಂಥ ಯಾವುದೇ ಬೆದರಿಕೆಗಳಿಗೆ ಹೆದರುವವರಲ್ಲ ಎಂದು ಸ್ಥಳಿಯ ಶಾಸಕ ವಿಶಾಲ್ ನೆಹಾರಿಯಾ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಟಕ ಕೂಡ ಈ ದುಷತ್ಯ ದುರದೃಷ್ಟಕರ ಎಂದಿದೆ. ವಿಧಾನಸಭಾ ಕಟ್ಟಡವನ್ನೇ ರಸಲಾಗದವರು, ದೇಶದ ಭದ್ರತೆಗೆ ಧಕ್ಕೆಯನ್ನುಂಟು ಮಾಡುವವರನ್ನು ಯಾವ ರೀತಿ ತಡೆಯುತ್ತಾರೆ. ಜನರಿಗೆ ಸುರಕ್ಷತೆಯನ್ನು ಹೇಗೆ ನೀಡುತ್ತಾರೆ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
ಎಸ್ಐಟಿ ರಚನೆ
ಈ ಪ್ರಚೋದನಾಕಾರಿ ಕೃತ್ಯವು ಶನಿವಾರ ರಾತ್ರಿ ಅಥವಾ ಭಾನುವಾರ ನಸುಕಿನಲ್ಲಿ ನಡೆದಿರುವ ಸಾಧ್ಯತೆ ಇದೆ. ವಿಧಾನಸಭಾ ಗೇಟ್ ಮೇಲಿದ್ದ ಖಲಿಸ್ತಾನದ ಬಾವುಟಗಳನ್ನು ತೆಗೆಯಲಾಗಿದೆ ಮತ್ತು ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಬಂಧಿಸಲು ಆರು ಸದಸ್ಯರ ವಿಶೇಷ ತಂಡ (ಎಸ್ಐಟಿ) ರಚಿಸಲಾಗಿದೆ ಡಿಜಿಪಿ ಸಂಜಯ್ ಖಂಡು ತಿಳಿಸಿದ್ದಾರೆ. ಏಪ್ರಿಲ್ 26ರಂದೇ ಈ ರೀತಿಯ ಅಸಹಜ ಟನೆಗಳು ನಡೆಯಬಹುದೆಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದ್ದವು. ಸಿಖ್ ಾರ್ ಜಸ್ಟೀಸ್ (ಎಸ್ಎ್ಜೆ) ಸಂಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು, ಶಿಮ್ಲಾದಲ್ಲಿ ಖಲಿಸ್ತಾನ್ ಬಾವುಟ ಮತ್ತು ಭಿಂದ್ರನ್ವಾಲೆ ಭಾವಚಿತ್ರವಿರುವ ಧ್ವಜಗಳನ್ನು ಮಾರ್ಚ್ 29 ಹಾರಿಸಲಾಗುವುದು ಎಂದು ಸಿಎಂ ಠಾಕೂರ್ಗೆ ಪತ್ರ ಬರೆದಿದ್ದ ಕಾರಣ ಆಗ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ, ಆಗ ಅಂಥ ಯಾವುದೇ ಟನೆ ನಡೆದಿರಲಿಲ್ಲ.
ಉಗ್ರರಿಂದ ಮುಂಬೈ ರೈಲು ಸ್ಫೋಟಕ್ಕೆ ಸಂಚು
ಹರಿಯಾಣದ ಕರ್ನಲ್ನಲ್ಲಿ ಬಂಧಿತರಾದ ನಾಲ್ವರು ಶಂಕಿತ ಉಗ್ರರು ಮುಂಬೈನಲ್ಲಿ ಲೋಕಲ್ ರೈಲನ್ನು ಗುರಿಯಾಗಿಟ್ಟುಕೊಂಡು ಸರಣಿ ಸ್ಫೋಟ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ತೆಲಂಗಾಣದ ಅದಿಲಾಬಾದ್ಗೆ ಸ್ಫೋಟಕ ಸಾಮಗ್ರಿಗಳನ್ನು ವಾಹನದಲ್ಲಿ ಒಯ್ಯುತ್ತಿದ್ದ ಲುಧಿಯಾನದ ಭೂಪಿಂದರ್ ಸಿಂಗ್, ಫಿರೋಜ್ಪುರದ ಗುರುಪ್ರೀತ್ ಸಿಂಗ್, ಪರಮಬೀರ್ ಸಿಂಗ್ ಮತ್ತು ಅಮನ್ದೀಪ್ ಸಿಂಗ್ಗೆ ಪಾಕ್ ನಂಟು ಇರುವ ಶಂಕೆ ಇದೆ. ಪಾಕ್ ಮೂಲದ ಹರ್ವೀಂದರ್ಸಿಂಗ್ ರಿಂಡಾ ಎಂಬ ಭಯೋತ್ಪಾದಕನ ಆಣತಿಯಂತೆ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಆತ ಭಯೋತ್ಪಾದನಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಬೇಕಾದ ಸ್ಥಳವನ್ನು ಆ್ಯಪ್ ಮೂಲಕ ಇವರಿಗೆ ಸೂಚಿಸುತ್ತಿದ್ದ ಎಂದು ಕರ್ನಲ್ನ ಪೊಲೀಸ್ ವರಿಷ್ಠಾಧಿಕಾರಿ ಗಂಗಾರಾಮ್ ಪುನಿಯಾ ತಿಳಿಸಿದ್ದಾರೆ. ಬೇಹುಗಾರಿಕಾ ಮಾಹಿತಿ ಆಧರಿಸಿ ಪಂಜಾಬ್ ಮತ್ತು ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಈ ನಾಲ್ವರನ್ನು ಬಸ್ತರಾ ಟೋಲ್ ಪ್ಲಾಜಾ ಬಳಿ ಬಂಧಿಸಿದ್ದರು. ತಲಾ ಎರಡೂವರೆ ಕೆ.ಜಿ. ತೂಕವಿದ್ದ 3 ಸುಧಾರಿತ ಸ್ಫೋಟಕ ಸಾಧನ (ಐಇಡಿ) ಹಾಗೂ ಪಿಸ್ತೂಲ್, 31 ಸುತ್ತಿನ ಸಜೀವ ಗುಂಡುಗಳು ಮತ್ತು 1.30 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು.