

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಪ್ರಥಮ ದರ್ಜೆ ಸಹಾಯಕನ ವಿರುದ್ಧ 65 ಲಕ್ಷ ರೂ. ದುರ್ಬಳಕೆ ಪ್ರಕರಣ ಸಂಬಂಧ ಪೂರಕ ದಾಖಲೆಗಳ ಸಮೇತ ವರದಿ ನೀಡುವಂತೆ ವಿಧಾನಸೌಧ ಪೊಲೀಸರು ಸೂಚಿಸಿದ್ದಾರೆ.
2007ರಿಂದ 2024ರವರೆಗೆ ಡಿಸಿಆರ್‌ಇ ಘಟಕದ ಕೇಂದ್ರ ಕಚೇರಿಯ ಸಂಗ್ರಹ ಶಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಎ್ಡಿಎ ಸಂತೋಷ್‌ಕುಮಾರ್ ಹಣ ದುರ್ಬಳಕೆ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಡಿಸಿಆರ್‌ಇ ಆಡಳಿತ ಅಧಿಕಾರಿ ಕಿರಣ್ ನೀಡಿದ ದೂರಿನ್ವಯ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿ ಸಂತೋಷ್ ಹಣ ದುರ್ಬಳಕೆ ಸಂಬಂಧ ವಿಸ್ತಾರವಾದ ವರದಿ ನೀಡುವಂತೆ ಸೂಚಿಸಿದ್ದೇವೆ. ಅಲ್ಲದೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಡಿಸಿಆರ್‌ಇಗೆ ಸೂಚಿಸಲಾಗಿದೆ. ಈ ವರದಿ ಕೊಡಲು ಅಧಿಕಾರಿಗಳು ಸಮಯ ಕೋರಿದ್ದು, ಆನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.