ಪೊಲೀಸರನ್ನು ರಕ್ಷಿಸಲು ಬಂತು ಖಾಕಿ ಕೋವಿಡ್ ಓವರ್​​ಕೋಟ್ ಅಸ್ತ್ರ..!

P-4_WEB2
Published on

ಬೆಂಗಳೂರು: ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿದರೆ ಕರೊನಾ ದಾಳಿಗೆ ಈಡಾಗುವ ಸಂಭಾವ್ಯತೆ ಹೆಚ್ಚಾಗಿರುವುದು ಪೊಲೀಸರಿಗೆ. ಈಗಾಗಲೇ ಮುಂಬೈ ಮಹಾನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು ಕೋವಿಡ್​​ಗೆ ತುತ್ತಾಗಿದ್ದಾರೆ. ಈ ನಿಟ್ಟಿನಲ್ಲಿ ಕರೊನಾ ವೈರಸ್ ಸೋಂಕನ್ನು ತಪ್ಪಿಸಲು ಪೊಲೀಸ್​​​ ಸಿಬ್ಬಂದಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರು ಮಹಾನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗೆ ಖಾಕಿ ಕೋವಿಡ್ ಓವರ್ ಕೋಟ್ ವಿನ್ಯಾಸಗೊಳಿಸಲಾಗಿದೆ.

ಖಾಕಿ ಕೋವಿಡ್ ಓವರ್​​ ಕೋಟ್ ನ ವಿಶೇಷತೆಗಳೇನು?

* ಇದು ಮೊಣಕಾಲು ಉದ್ದದ ಕೋಟ್ ಆಗಿದ್ದು, ಮುಖದ ಮೇಲೆ ಎಲಾಸ್ಟಿಕ್ ಬ್ಯಾಂಡ್ ಹೊಂದಿದೆ.

* ಇದನ್ನು ಪುನಃ ತೊಳೆದು ಉಪಯೋಗಿಸಬಹುದು ಮತ್ತು ಬೇಸಿಗೆಯ ಬಿರು ಬಿಸಿಲಿನಲ್ಲೂ ಇದು ಧರಿಸಲು ಸೂಕ್ತವಾಗಿರುತ್ತದೆ.

* ಅದರೊಂದಿಗೆ ಕೈಗವಸುಗಳು ಮತ್ತು ಮಾಸ್ಕ್​​​​ಗಳನ್ನು, ವೈರಸ್​​ ಅನ್ನು ಧರಿಸಬಹುದು.

ಠಾಣಾಧಿಕಾರಿಗಳಿಗಾಗಿ (ಎಸ್​ಎಚ್​​ಒ) ಕೆಲಸ ಮಾಡುವ ಕಂಪಾರ್ಟ್​​​ಮೆಂಟ್: ವಿವಿಧ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಅಂತರವನ್ನು ಕಾಪಾಡಿಕೊಳ್ಳಲು ಸಹಾಯವಾಗುವಂಥ ಒಂದು ಕಂಪಾರ್ಟ್​​ಮೆಂಟ್ ಅನ್ನು ಕೂಡ ವಿನ್ಯಾಸಗೊಳಿಸಲಾಗಿದೆ.

* ದಿನನಿತ್ಯದ ಕಾರ್ಯನಿರ್ವಹಿಸುವಲ್ಲಿ ಇದು ಪೊಲೀಸರಿಗೆ ಸಹಾಯಕವಾಗಲಿದೆ.

* ಈ ಕಂಪಾರ್ಟ್​​​ಮೆಂಟ್​​ಗೆ ಆಡಿಯೊ ಮೈಕ್ ಮತ್ತು ಧ್ವನಿವರ್ಧಕವನ್ನು ಜೋಡಿಸುವ ಮೂಲಕ ಸಾರ್ವಜನಿಕರೊಂದಿಗೆ ಸುಲಭವಾಗಿ ಸಂವಹನ ಸಾಧಿಸಲು ಸಾಧ್ಯವಾಗುತ್ತದೆ..

* ಕಾಗದ ಪತ್ರಗಳ ಕೊಡು-ಕೊಳ್ಳುವಿಕೆಗೆ ಸಹಾಯವಾಗುವಂತೆ ಇದರಲ್ಲಿ ಟ್ರೇ ಅನ್ನು ಸಹ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net