ಕಾಂಗ್ರೆಸ್​ಗೆ ಟಾಟಾ ಹೇಳಿದ ಕೆಜಿಎಫ್​ ಬಾಬು

KGF Babu
Published on

ಬೆಂಗಳೂರು: ಇದೀಗ ಟಿಕೆಟ್​ ಕೈ ತಪ್ಪಿರುವ ಕಾರಣ ಕೆಜಿಎಫ್​ ಬಾಬು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕೆಜಿಎಫ್​ ಬಾಬು, "ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳ ಕಾರಣ ಅಸಮಾಧಾನಗೊಂಡು ಪಕ್ಷ ಬಿಡುತ್ತಿದ್ದೇನೆ" ಎಂದು ಅಸ್ಪಷ್ಟವಾಗಿ ಕಾರಣ ನೀಡಿದ್ದಾರೆ.

ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು, ಜಿಎಸ್​ಟಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಮೂಮತಾದವರು ದಾಳಿ ಮಾಡಿದ್ದರು. ಈ ಸಂದರ್ಭ ಅಪಾರ ಪ್ರಮಾಣದಲ್ಲಿ ಸೀರೆಗಳು ಪತ್ತೆಯಾಗಿದ್ದವು. ಅಕ್ರಮವಾಗಿ ಖರೀದಿ ಮಾಡಿದ್ದು ಎಂಬ ಶಂಕೆ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿತ್ತು. ಈ ಘಟನೆ ನಡೆದದ್ದೇ ಇದೀಗ ಕಾಂಗ್ರೆಸ್ ಪಕ್ಷಕ್ಕೇ ಕೆಜಿಎಫ್​ ಬಾಬು ರಾಜೀನಾಮೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net