

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಹಲವು ತಿಂಗಳುಗಳು ಕಳೆದಿವೆ. ಇದೀಗ ಸುಶಾಂತ್ ಸಿಂಗ್ನಂತೆಯೇ ತನಗೂ ಸಿನಿಮಾ ಇಂಡಸ್ಟ್ರಿಯಿಂದ ಸಾಕಷ್ಟು ನೋವಾಗುತ್ತಿರುವುದಾಗಿ ನಟರೊಬ್ಬರು ಆರೋಪಿಸಿದ್ದಾರೆ. ನನ್ನನ್ನೂ ಸಾವಿಕ ಕೂಪಕ್ಕೆ ತಳ್ಳಲು ನೋಡಲಾಗುತ್ತಿದೆ ಆದರೆ ನಾನು ಗಟ್ಟಿಯಿದ್ದೇನೆ, ಸಮಸ್ಯೆಯನ್ನು ಗೆದ್ದು ನಿಲ್ಲುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಭೋಜ್ಪುರಿ ನಟ ಕೇಸರಿ ಲಾಲ್ ಯಾದವ್ ಈ ರೀತಿಯ ಆರೋಪ ಮಾಡಿರುವ ನಟ. ಸಿನಿಮಾ ಕ್ಷೇತ್ರದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆಯಂತೆ. ಅವರನ್ನು ಕರೊನಾ ಪಾಸಿಟಿವ್ ರೀತಿಯಲ್ಲಿ ನೋಡಲಾಗುತ್ತಿದೆಯಂತೆ. ಸುಶಾಂತ್ ಸಿಂಗ್ ಅವರ ಊರಿನವನೇ ಆದ ನನ್ನನ್ನು ಅದೇ ರೀತಿಯಲ್ಲೇ ನಡೆಸಿಕೊಳ್ಳಲಾಗುತ್ತಿದೆ. ಆದರೆ ನಾನು ಮೃದು ಸ್ವಭಾವದವನು ಅಲ್ಲ. ನಾನು ಗಟ್ಟಿ ಹೃದಯದವನು. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ ಎಂದು ಅವರು ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಕೇಸರಿ ಲಾಲ್ ನಟಿ ಕಾಜಲ್ ರಾಘವಾನಿ ಮೇಲೆ ಗಂಭೀರ ಆರೋಪ ಮಾಡಿದ್ದರು. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದರು. ಅದಕ್ಕೆ ಉತ್ತರಿಸಿದ್ದ ಕಾಜಲ್, ಕೇಸರಿ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದಾನೆ. ನಾನೂ ಸಂದರ್ಶನಗಳನ್ನು ಕೊಡುತ್ತೇನೆ ಆದರೆ ಮೋಸ ಮಾಡಿದ್ದಾರೆ ಎಂದು ಆರೋಪಗಳನ್ನು ಮಾಡುತ್ತಾ ಕೂರುವುದಿಲ್ಲ ಎಂದು ಹೇಳಿದ್ದರು.
ಲೈವ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಇಂದು ಫೇಸ್ಬುಕ್ ಲೈವ್ ಬಂದ ಕೇಸರಿ, ಕಾಜಲ್ ಹೆಸರು ತೆಗೆಯದೆಯೇ ಅವರನ್ನು ನಿಂದಿಸಿದ್ದಾರೆ. ಜಗಳ ಆಡುವುದನ್ನು ಬಿಟ್ಟು ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)