ಗಂಟಲಿನಲ್ಲಿ ಕೇಕ್ ಸಿಲುಕಿಕೊಂಡು ಮಹಿಳೆ ಸಾವು! cupcake

cupcake 
Published on

ಕೇರಳ: ಗಂಟಲಿನಲ್ಲಿ ಕೇಕ್‌ ತುಂಡು  ( cupcake  ) ಸಿಲುಕಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದರು. ಕೇರಳದಲ್ಲಿ ಈ ಘಟನೆ ನಡೆದಿದೆ.

ಜೈನಬಾ ಮೃತ ಮಹಿಳೆ. ಈಕೆ ಪತಿ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಮಗಳ ಮದುವೆಗೆ ಕೇವಲ ಒಂದು ದಿನ ಮೊದಲು ಈ  ದುರಂತ ಸಂಭವಿಸಿದೆ.

ಜೈನಬಾ ಅವರ ಮಗಳು ಖೈರುನ್ನೀಸಾ ಅವರ ವಿವಾಹ ನಡೆಯುತಿತ್ತು. ಕಳೆದ ಗುರುವಾರ, ಆಕೆಯ ಗಂಟಲಿನಲ್ಲಿ ಕೇಕ್ ಸಿಲುಕಿಕೊಂಡು ಪ್ರಜ್ಞೆ ತಪ್ಪಿದ್ದಳು. ಆಕೆಯನ್ನು ತಕ್ಷಣ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶುಕ್ರವಾರ ಆಕೆ ಮೃತಪಟ್ಟಳು. ಅವರ ಏಕೈಕ ಪುತ್ರಿ ಖೈರುನ್ನೀಸಾಳ ಮದುವೆ ಶನಿವಾರ (ಮೇ 31) ನಡೆಯಬೇಕಿತ್ತು, ಆದರೆ ತಾಯಿಯ ಮರಣವು ಮದುವೆಯ ಮನೆಯಲ್ಲಿ ದುಃಖದ ಛಾಯೆಯನ್ನು ಮೂಡಿಸಿತು.

ತಾಯಿಯ ಜೀವಕ್ಕೆ ಅಪಾಯವಿದ್ದ ಕಾರಣ, ಮಗಳ ವಿವಾಹ ಸಮಾರಂಭವನ್ನು ಕೇವಲ ತುರ್ತು ಪರಿಸ್ಥಿತಿಯಾಗಿ ನಡೆಸಲಾಯಿತು. ಇತರ ವಿವಾಹ ಸಮಾರಂಭಗಳನ್ನು ಮುಂದೂಡಲಾಗಿದೆ. ಜೈನಬಾ ಅವರಿಗೆ ಮಗಳ ಮದುವೆಗೆ ಕೇವಲ ಒಂದು ದಿನ ಮೊದಲು ಈ ದುರಂತ ಸಂಭವಿಸಿದ್ದು ಕುಟುಂಬಸ್ಥರಲ್ಲಿ ದುಖಃದ ಛಾಯೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net