ಲಾಕ್​ಡೌನ್​ನಿಂದಾಗಿ ಆಲ್ಕೋಹಾಲ್​ ಸಿಗದಿದ್ದಕ್ಕೆ ದಿನಗೂಲಿ ನೌಕರ ತೆಗೆದುಕೊಂಡ ನಿರ್ಧಾರ ಸರೀನಾ?

Drinks
Published on

ತ್ರಿಶ್ಶೂರ್​: ಕರೊನಾ ವೈರಸ್​ ತಡೆಗಟ್ಟಲು ಕರೆ ನೀಡಿರುವ ಲಾಕ್​ಡೌನ್​ನಿಂದಾಗಿ ಆಲ್ಕೋಹಾಲ್​ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಕೇರಳದ 38 ವರ್ಷದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ವೃತ್ತಿಯಲ್ಲಿ ಪೇಂಟರ್​ ಆಗಿರುವ ಸನೋಜ್​ ತಮ್ಮ ನಿವಾಸದ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಎಲ್ಲಿಯೂ ಆಲ್ಕೋಹಾಲ್​ ದೊರೆಯದಿದ್ದಕ್ಕೆ ಸನೋಜ್​ ತುಂಬಾ ಹತಾಶನಾಗಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ವಾಭವಿಕವಲ್ಲದ ಮರಣ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಲಾಕ್​ಡೌನ್​ ಆದೇಶ ಹೊರಬಿದ್ದಾಗಿನಿಂದ ಕೇರಳದಲ್ಲಿ ಖಾಸಗಿ ಮತ್ತು ಸರ್ಕಾರಿ ವೈನ್​ ಸ್ಟೋರ್​ಗಳು ಸಂಪೂರ್ಣ ಬಂದ್​ ಆಗಿವೆ. ಈವರೆಗೂ ಕೇರಳದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಕರೊನಾ ವೈರಸ್​ ಸೋಂಕು ತಗುಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net