

ಬೆಂಗಳೂರು: ಕೇರಳ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಹೇರಬೇಕು. ಕೇರಳ ಭಯೋತ್ಪಾದಕರ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
ಪಾಕಿಸ್ತಾನದ ಕಾರ್ಖಾನೆಯಲ್ಲಿ ತಯಾರಿಸಿರುವ 14 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸದೆ ಟ್ವೀಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಕೊಲ್ಲಂ ಜಿಲ್ಲೆಯ ಕುಲತುಪೂಝಾ ಎಂಬಲ್ಲಿನ ಪೊಲೀಸ್ ಠಾಣೆಯಿಂದ ಬಂದೂಕು ಮತ್ತು ಬುಲೆಟ್ಗಳು ನಾಪತ್ತೆಯಾಗಿದ್ದವು. ಈಗ 14 ಜೀವಂತ ಬುಲೆಟ್ಗಳು ಸಿಕ್ಕಿವೆ ಎಂದು ಬರೆದುಕೊಂಡಿದ್ದಾರೆ.
ಸಿಎಎ ಪರ ಇರುವುದಕ್ಕೆ ಅಲ್ಲಿನ ಹಿಂದುಗಳಿಗೆ ಸಮಸ್ಯೆ ತಂದೊಡ್ಡಲಾಗುತ್ತಿದೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
14 ಜೀವಂತ ಬುಲೆಟ್ಗಳು ಸಿಕ್ಕಿರುವುದನ್ನು ಅಲ್ಲಿನ ಪೊಲೀಸರು ಖಚಿತ ಪಡಿಸಿದ್ದಾರೆ. ಜತೆಗೆ ಆ ಬುಲೆಟ್ಗಳ ಮೇಲೆ ಪಾಕಿಸ್ತಾನದ ಮುದ್ರೆ ಇರುವುದಾಗಿ ತಿಳಿಸಿದ ಪೊಲೀಸರು ಹೆಚ್ಚಿನ ತನಿಖೆಯಿಂದಷ್ಟೆ ಸತ್ಯ ಬಯಲಾಗಬೇಕಿದೆ ಎಂದಿದ್ದಾರೆ.