ಕೇರಳ ಸರಣಿ ಸ್ಫೋಟ: ಬಾಂಬ್‌ ತಯಾರಿಸಲು ಆರೋಪಿ ಖರ್ಚು ಮಾಡಿದ್ದು 3ಸಾವಿರ ರೂ.ಮಾತ್ರ!

kerala
Published on

ಕೊಚ್ಚಿ: ಕೇರಳದ ಕಲಮಸ್ಸೆರಿಯ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟದ ಶಂಕಿತ ಆರೋಪಿ ಡೊಮಿನಿಕ್ ಮಾರ್ಟಿನ್(48 ) ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತಿದ್ದು, ಬಾಂಬ್ ತಯಾರಿಸಲು 3ಸಾವಿರ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಮಾರ್ಟಿನ್ ಕುಟುಂಬವು ಕೊಚ್ಚಿ ಬಳಿ ಕಳೆದ ಐದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಎಲೆಕ್ಟ್ರಿಕ್ ಸರ್ಕ್ಯೂಟ್‌ನಲ್ಲಿ ಪರಿಣಿತ ಎಂದು ಹೇಳಲಾದ ಮಾರ್ಟಿನ್ ದುಬೈನಲ್ಲಿ ಫೋರ್‌ಮ್ಯಾನ್ ಆಗಿ ಹಲವು ವರ್ಷ ಕೆಲಸ ಮಾಡಿದ್ದು, ಎಲೆಕ್ಟ್ರಾನಿಕ್ ಸಾಧನವನ್ನು ಜೋಡಿಸಲು ಕಲಿಕೊಂಡಿದ್ದ. 2ತಿಂಗಳ ಹಿಂದೆ ದುಬೈನಿಂದ ವಾಪಸ್ಸಾಗಿದ್ದು, ಸ್ಫೋಟ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯ ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳಿಂದ ಬಾಂಬ್​ ತಯಾರಿಸಲಾಗಿದೆ.

ಮಾರ್ಟಿನ್ ತನ್ನ ಮನೆಯಲ್ಲಿಯೇ ಐಇಡಿಗಳನ್ನು ಜೋಡಿಸಿ ಬಾಂಬ್​ ತಯಾರಿದಸಿದ್ದಾನೆ. ಶರಣಾಗುವ ಮೊದಲು, ಆತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರಾರ್ಥನಾ ಸಮಾವೇಶದ ಬೋಧನೆಗಳು "ದೇಶದ್ರೋಹಿ" ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಯೆಹೋವನ ಸಾಕ್ಷಿ ಆಯೋಜಿಸಿದ್ದ ಸಂಘಟಕರು ಮತ್ತು ಈ ಸಮುದಾಯವು ಸಾರ್ವಜನಿಕರು, ಮಕ್ಕಳಿಗೆ ಸಹ ತಪ್ಪು ಸಂದೇಶ ಹಾಗೂ ಮೌಲ್ಯಗಳನ್ನು ಕಲಿಸುತ್ತಿದೆ. ಸಮಾವೇಶ ನಿಲ್ಲಿಸಲು ಕೇಳಿಕೊಂಡಿದ್ದರೂ ಯಾರೂ ಗಮನಿಸಲಿಲ್ಲ. ಹೀಗಾಗಿ ಸರಣಿ ಸ್ಫೋಟ ಮಾಡಲು ನಿರ್ಧರಿಸಿದೆ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಭಾನುವಾರ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ 2ಸಾವಿರ ಜನ ಹಾಜರಿದ್ದರು.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಸರಣಿ ಸ್ಫೋಟಗಳ ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net