

ನವದೆಹಲಿ: ಕೇರಳ ರಾಜ್ಯ ನನ್ನ ಮೇಲೆ ದೂರು ದಾಖಲಿಸಿದೆ. ಅವರು ರಾಷ್ಟ್ರ ವಿರೋಧಿ ಅಥವಾ ಸಮಾಜ ವಿರೋಧಿ ಚಟುವಟಿಕೆ ಮಾಡುವವರು ಇವರಿಗೆ ಕಾಣುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಮಾಜ ವಿರೋಧಿಗಳನ್ನು ಬಿಟ್ಟು ನನ್ನ ಮೇಲೆ ದೂರು ದಾಖಲಿಸಿರುವ ಅವರಿಗೆ ಮುಖ್ಯವಾಗಿರುವುದು ಕೇವಲ ವೋಟ್ ಬ್ಯಾಂಕ್ ಎಂದು ಕೇರಳ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಲಪ್ಪುರಂ ಬಳಿಯ ಕುಟ್ಟಿಪುರಂ ಗ್ರಾಮದ ಹಿಂದುಗಳಿಗೆ ನೀರು ಪೂರೈಕೆ ಮಾಡಿಲ್ಲ. ಅದಕ್ಕೆ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮ್ಮತಿಸಿದ್ದು ಎಂದು ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಅವರ ವಿರುದ್ಧ ಕೇರಳ ರಾಜ್ಯದಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಧರ್ಮ, ಜನಾಂಗ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. (ಏಜೆನ್ಸೀಸ್)