ಮಕ್ಕಳಿಲ್ಲದ ಸಮಯ, ಹತ್ಯೆಗೆ ಸಂಚು! ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ ಹೆದರಿ ಆತ್ಮಹತ್ಯೆಗೆ ಶರಣು | Wife

ವಿಜಯವಾಣಿ - 2025-03-04T141646.660
Published on

Wife Murder: ಮತ್ತೊಂದು ಭೀಕರ ಹತ್ಯೆಗೆ ಕೇರಳ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಅಫಾನ್​ ಎಂಬ ಯುವಕ ತನ್ನ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದು, ಪೊಲೀಸರ ಮುಂದೆ ಶರಣಾಗಿದ್ದ. ಈ ಘಟನೆ ಮಾಸುವ ಮುನ್ನವೇ ಈ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಪತ್ನಿಯನ್ನು ಮನೆಯಲ್ಲಿದ್ದ ಬಂದೂಕಿನಿಂದ ಗುಂಡಿಟ್ಟು ಕೊಂದ ಪತಿ ಕೃಷ್ಣಕುಮಾರ್, ಸಂಗೀತಾಳನ್ನು ಹತ್ಯೆಗೈದ ನಂತರ ತಾನೂ ಸಾವಿಗೆ ಶರಣಾದ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇಬ್ಬರ ಮಧ್ಯೆ ಯಾವುದೂ ಸರಿಯಿರಲಿಲ್ಲ. ನೋಡುವವರ ಕಣ್ಣಿಗೆ ಚೆನ್ನಾಗಿ ಕಂಡಿದ್ದೇ ಆದರೂ ಇಬ್ಬರ ನಡುವೆ ಸಾಕಷ್ಟು ಮನಸ್ತಾಪಗಳು ಇದ್ದ ಕಾರಣದಿಂದಲೇ ಈ ಘಟನೆ ಸಂಭವಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಸೋಮವಾರ (ಮಾ.03) ಬೆಳಗ್ಗೆ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ, ನಂತರದಲ್ಲಿ ತನ್ನ ಮನೆಯ ಹೊರಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಕೃಷ್ಣಕುಮಾರ್ ಮತ್ತು ಸಂಗೀತ ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಇದೇ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿಗೆ ಅಮೀಷಾ ಮತ್ತು ಅಕ್ಷರ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಈ ಇಬ್ಬರೂ ಬದುಕುಳಿದಿದ್ದಾರೆ.

ಸೋಮವಾರ ಮುಂಜಾನೆ, ವಂಡಾಜಿಯಲ್ಲಿರುವ ತನ್ನ ಕುಟುಂಬದವರ ಮನೆಯಿಂದ ಹೊರಟು ಸುಮಾರು 100 ಕಿ.ಮೀ ದೂರದ ಕೊಯಮತ್ತೂರಿಗೆ ಪ್ರಯಾಣಿಸಿದ ಕೃಷ್ಣಕುಮಾರ್ (52), ಅಲ್ಲಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿರಾಗಿ ಕೆಲಸ ಮಾಡುತ್ತಿದ್ದ ತನ್ನ ಪತ್ನಿ ಸಂಗೀತಾಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದಾದ ಮರು ದಿನವೇ ಕೃಷ್ಣಕುಮಾರ್ ಪತ್ನಿಯನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಅಪರಾಧ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಸಂಗೀತಾಳ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಸಂಗೀತಾ ತನ್ನ ಗೆಳೆಯನೊಂದಿಗೆ ಸ್ನೇಹ ಬೆಳೆಸುವುದನ್ನು ಒಪ್ಪದ ಕೃಷ್ಣಕುಮಾರ್​, ಇದೇ ವಿಚಾರಕ್ಕೆ ಹಲವಾರು ಬಾರಿ ಪತ್ನಿಯೊಂದಿಗೆ ಜಗಳವಾಡಿದ್ದರು. ಒಂದಷ್ಟು ವರದಿಗಳ ಪ್ರಕಾರ, ಕೆಲವು ತಿಂಗಳಿನಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಮತ್ತು ವಿಚ್ಛೇದನ ಪಡೆಯುವ ಬಗ್ಗೆಯೂ ಚರ್ಚಿಸಿದ್ದರು ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net