

ಕರೊನಾ ವೈರಸ್ ಪತ್ತೆ ಹಚ್ಚುವ ಕಿಟ್ನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಕೇರಳದ ವಿದ್ಯಾಲಯವೊಂದರಲ್ಲಿ ನಿಖರ ವರದಿ ನೀಡುವಂತಹ ಕಿಟ್ ತಯಾರಿಸಲಾಗಿದೆ.
ಶ್ರೀ ಚಿತ್ರಾ ತಿರುನಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಕಂಡುಹಿಡಿಯಲಾಗಿರುವ ಕಿಟ್ ಮೂಲಕ 2 ಗಂಟೆಯ ಅವಧಿಯಲ್ಲಿ ಕರೊನಾ ಪತ್ತೆ ಹಚ್ಚಬಹುದಾಗಿದೆ. ಬಯೋಮೆಡಿಕಲ್ ಟೆಕ್ನಾಲಜಿ ವಿಭಾಗದ ಮುಖ್ಯ ವಿಜ್ಞಾನಿ ಡಾ. ಅನೂಪ್ ಚಿತ್ರಾ ಜೀನ್ಲ್ಯಾಂಪ್ ಎನ್ ಹೆಸರಿನ ಕಿಟ್ ತಯಾರಿಸಿದ್ದು ಈ ಕಿಟ್ ಜೀನ್ನ ಎರಡು ಪ್ರದೇಶಗಳನ್ನು ಕಂಡುಹಿಡಿಯುತ್ತದೆ.
ವೈರಸ್ ಹರಡುವಿಕೆಯ ಸಮಯದಲ್ಲಿ ರೂಪಾಂತರಗೊಂಡಿದ್ದರೂ ಈ ಕಿಟ್ ಅದನ್ನು ಗುರುತಿಸಬಲ್ಲದ್ದಾಗಿದೆ. ಐಸಿಎಮ್ರ್ನಲ್ಲಿ ಅಧಿಕೃತವೆನಿಸಿಕೊಂಡಿರುವ ಕಿಟ್ನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಶೇ.100 ನಿಖರ ಫಲಿತಾಂಶವನ್ನು ಕಿಟ್ ನೀಡಿದೆ. ಸಿಡಿಎಸ್ಸಿಒನಿಂದ ಪರವಾನಗಿ ಸಿಗುವುದು ಬಾಕಿಯಿದ್ದು, ಒಂದು ಕಿಟ್ 2.5 ಲಕ್ಷ ರೂಪಾಯಿ ಮೌಲ್ಯದ್ದಾಗಿರಲಿದೆ.