Kerala ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಶಾಲಿಗೆ ತಗುಲಿದ ಬೆಂಕಿ, ಅಪಾಯದಿಂದ ಪಾರು

kerala
Published on

ಪಾಲಕ್ಕಾಡ್: ಕೇರಳದ Kerala ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು (ಮಂಗಳವಾರ) ಪಾಲಕ್ಕಾಡ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಿಸುವಾಗ ಅವರ ಶಾಲಿಗೆ ಬೆಂಕಿ ತಗುಲಿ ಬೆಂಕಿ ತಗುಲಿದೆ. ಅವರು ಈ ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ತಕ್ಷಣ ಆ ಬೆಂಕಿಯನ್ನು ಆರಿಸಲಾಯಿತು.

ಅಧಿಕೃತ ಮೂಲಗಳ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಿಸುವಾಗ ರಾಜ್ಯಪಾಲರು ಧರಿಸಿದ್ದ ಶಾಲಿಗೆ ಬೆಂಕಿ ಹೊತ್ತಿಕೊಂಡಿದೆ.

ಶಬರಿ ಆಶ್ರಮದ 'ಶತಾಬ್ದಿ' ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಲು ರಾಜ್ಯಪಾಲರು ಬಾಗುತ್ತಿದ್ದಂತೆ ಅವರ ಶಾಲಿನ ತುದಿಗೆ ಬೆಂಕಿ ಹೊತ್ತಿಕೊಂಡಿತು ಎಂದು ಮೂಲಗಳು ತಿಳಿಸಿವೆ. "ಸ್ಥಳದಲ್ಲೇ ಅದನ್ನು ಕೂಡಲೇ ನಂದಿಸಲಾಯಿತು. ಆದರೆ ಯಾರಿಗೂ ಗಾಯಗಳಾಗಿಲ್ಲ" ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಅಗ್ನಿ ದುರಂತದಲ್ಲಿ, ಸೋಮವಾರ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಚಲಿಸುತ್ತಿದ್ದ ಬೆಸ್ಟ್ ಬಸ್ ಬೆಂಕಿಗೆ ಆಹುತಿಯಾಗಿದೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಮುಂಬೈನ ಗಾಂಧಿ ನಗರ ಜಂಕ್ಷನ್‌ನಲ್ಲಿ ಮಧ್ಯಾಹ್ನ 1.50 ಕ್ಕೆ ಈ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ 20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದರು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net