

kerala | ರಾಜ್ಯ ಸರ್ಕಾರಿ ನೌಕರರಿಗೆ ಕೇರಳ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಶೇಕಡ 12 ರಿಂದ ಶೇಕಡ 15 ಕ್ಕೆ ಹೆಚ್ಚಿಸಲಾಗುವುದು ಎಂದು ಕೇರಳ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶಿಕ್ಷಕರು, ಅನುದಾನಿತ ಶಾಲೆಗಳ ನೌಕರರು, ಖಾಸಗಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು, ಪೂರ್ಣಾವಧಿ ತಾತ್ಕಾಲಿಕ ನೌಕರರು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಇದು ಅನ್ವಯವಾಗಲಿದೆ.
ಪರಿಷ್ಕೃತ ತುಟ್ಟಿ ಭತ್ಯೆಯು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ (ಅರೆಕಾಲಿಕ) ಶಿಕ್ಷಕರು, ಗುತ್ತಿಗೆ ಆಧಾರದ ಉದ್ಯೋಗಿಗಳು ಮತ್ತು ಮರು ಉದ್ಯೋಗದಲ್ಲಿರುವ ಪಿಂಚಣಿದಾರರಿಗೂ ಅವರ ವೇತನ ಶ್ರೇಣಿಯ ಆಧಾರದ ಮೇಲೆ ಈ ನಿಯಮ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಈ ಸಂಬಂಧ ಕೇರಳ ರಾಜ್ಯ ಹಣಕಾಸು ಇಲಾಖೆ ಹೊರಡಿಸಿದ ಆದೇಶದ ಪ್ರಕಾರ ಸರ್ಕಾರಿ ಸೇವೆ, ಗ್ರಾಚ್ಯುಟಿ ಹಾಗೂ ಕುಟುಂಬ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಪರಿಹಾರವನ್ನು ಶೇ. 12 ರಿಂದ ಶೇ. 15 ಕ್ಕೆ ಹೆಚ್ಚಿಸಲಾಗಿದೆ. ಈ ಘೋಷಣೆಯಿಂದ ಉದ್ಯೋಗಿಗಳು ತುಂಬಾ ಸಂತೋಷಗೊಂಡಿದ್ದಾರೆ.
ಹೆಚ್ಚಿದ ತುಟ್ಟಿ ಭತ್ಯೆಯನ್ನು 2025 ರ ಏಪ್ರಿಲ್ ನಿಂದ ಆ ತಿಂಗಳ ಸಂಬಳ ಮತ್ತು ಪಿಂಚಣಿಯೊಂದಿಗೆ ಪಾವತಿಸಲಾಗುವುದು ಎಂದು ಘೋಷಿಸಲಾಗಿದೆ. ಇದನ್ನು ಮೇ 2025 ರಿಂದ ನೌಕಕರಿಗೆ ನೀಡಲಾಗುತ್ತದೆ. ಆದಾಗ್ಯೂ, ಈ ಹೆಚ್ಚಳವು ಕೇರಳ ರಾಜ್ಯ ವಿದ್ಯುತ್ ಮಂಡಳಿ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದಂತಹ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ನೀಡುವಾಗ, ಪ್ರಸ್ತುತ ನಿಯಮಗಳನ್ನು ಅನುಸರಿಸಿ ಸರ್ಕಾರದ ಅನುಮೋದನೆಯನ್ನು ಪಡೆಯಬೇಕು ಎಂದು ಸಹ ಸೂಚನೆ ನೀಡಲಾಗಿದೆ.
ಈ ನಿಯಮ ಯಾವಾಗ ಜಾರಿಯಾಗಲಿದೆ
ರಾಜ್ಯ ತುಟ್ಟಿ ಭತ್ಯೆ ಅಥವಾ ತುಟ್ಟಿ ಪರಿಹಾರ ವ್ಯವಸ್ಥೆಯನ್ನು ಈಗಾಗಲೇ ಅನುಸರಿಸುತ್ತಿರುವ ಕಂಪನಿಗಳು ಸರ್ಕಾರವನ್ನು ಕೇಳದೆಯೇ ಪರಿಷ್ಕೃತ ದರಗಳನ್ನು ಜಾರಿಗೆ ತರಬಹುದು. ಏಕೆಂದರೆ ಅವರ ನಿರ್ದೇಶಕರ ಮಂಡಳಿ ಮತ್ತು ಆಡಳಿತ ಮಂಡಳಿಗೆ ಅವರು ಈ ನಿರ್ಧಾರವನ್ನು ತಿಳಿಸತಕ್ಕದ್ದು, ಮತ್ತು ಅವರ ಸ್ವಂತ ಸಂಪನ್ಮೂಲಗಳಿಂದ ವೆಚ್ಚವನ್ನು ಭರಿಸಬಹುದು ಎಂದು ಹೇಳಲಾಗಿದೆ. ಸಂಸ್ಥೆಯು ವೆಚ್ಚವನ್ನು ಭರಿಸಲಾಗದಿದ್ದರೆ, ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು. ಯೋಜನೆಯ ಶೇ 90 ಕ್ಕಿಂತ ಹೆಚ್ಚು ಅಥವಾ ಯೋಜನೆಗೆ ಹೊರತಾದ ಸಬ್ಸಿಡಿಗಳಿಂದ ಸಂಬಳ ಅಥವಾ ಪಿಂಚಣಿ ವೆಚ್ಚಗಳನ್ನು ಭರಿಸಲಾಗುವ ಕಂಪನಿಗಳು, ಸರ್ಕಾರದ ಅನುಮೋದನೆ ಪಡೆಯದೆಯೇ ತಮ್ಮ ನಿರ್ವಹಣಾ ತಂಡಗಳಿಂದ ಆಂತರಿಕ ಅನುಮೋದನೆಯೊಂದಿಗೆ ಪರಿಷ್ಕೃತ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಪ್ರಯೋಜನಗಳನ್ನು ನೀಡಬಹುದು ಎಂದು ಸರ್ಕಾರ ಹೇಳಿದೆ.