ಮದುವೆ ದಿನ ಪರೀಕ್ಷೆ ಬರೆಯಲು ಕಾರಣವೇನೆಂದು ತಿಳಿಸಿದ ವಧು; ಈಕೆಯ ಹಿಂದಿದೆ ಸ್ಫೂರ್ತಿದಾಯಕ ಕಥೆ!

Kerala bride
Published on

ಕೊಚ್ಚಿ: ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ತನ್ನ ಮದುವೆಯ ದಿನದಂದೇ ಸ್ಟೆತಸ್ಕೋಪ್, ಬಿಳಿ ಕೋಟ್ ಧರಿಸಿ ಫಿಸಿಯೋಥೆರಪಿ ಪರೀಕ್ಷೆ ಬರೆಯುತ್ತಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಧು ಪರೀಕ್ಷೆಗೆ ಹಾಜರಾದ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು ಮತ್ತ ಈ ಬಗ್ಗೆ ಅನೇಕರು ಮೆಚ್ಚುಗೆಯನ್ನೂ ಸೂಚಿಸಿದ್ದರು.

ಇದೀಗ ವಧು ಶ್ರೀ ಲಕ್ಷ್ಮಿ ಅನಿಲ್ ಸ್ಫೂರ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದು ತಾನು ಮದುವೆ ದಿನದಂದು ಪರೀಕ್ಷೆಗೆ ಹಾಜರಾಗಿದ್ದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ. ನನಗೆ ಎಂಟು ವರ್ಷವಿದ್ದಾಗ ಮನೆಯಲ್ಲಿ ಅಮ್ಮನಿಗೆ ಜ್ವರ ಬಂದಿತ್ತು. ಆ ಸಮಯದಲ್ಲಿ ನಾನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದೆ. ಈ ವೇಳೆ ವೈದ್ಯರ ಸಂಖ್ಯೆ ಕಡಿಮೆ ಇದ್ದುದರಿಂದ ರೋಗಿಗಳ ಸಂಖ್ಯೆ ಹೆಚ್ಚಿತ್ತು. ಇದರಿಂದ ಅನೇಕರು ಸರಿಯಾದ ಚಿಕಿತ್ಸೆ ಸಿಗದೆ ಪರಿತಪಿಸುವಂತಾಗಿತ್ತು.

ಬಿಳಿ ಕೋಟು ಧರಿಸಿದ್ದವರ ಸುತ್ತಲೂ ಜನರಿದ್ದರು. ಈ ದೃಶ್ಯ ನನ್ನ ಗಮನ ಸೆಳೆದಿತ್ತು. ಆ ಕ್ಷಣವೇ ಅಮ್ಮನಲ್ಲಿ ಬಂದು ನಾನು ಮುಂದೊಂದು ದಿನ ವೈದ್ಯೆಯಾಗಿ ಜನರು ರೋಗವನ್ನ ಗುಣ ಪಡಿಸುತ್ತೇನೆ ಎಂದು ಹೇಳಿದ್ದೆ. ಇದಕ್ಕಾಗಿ ಮುಂದಿನ ಹತ್ತು ವರ್ಷಗಳ ಕಾಲ ಹಗಲು ರಾತ್ರಿ ಕಷ್ಟ ಪಟ್ಟು ಓದಿದ್ದೇನೆ. ಇದೇ ಸಂದರ್ಭದಲ್ಲಿ ನನ್ನ ಮದುವೆಯೂ ನಿಶ್ಚಿಯಿಸಲ್ಪಟ್ಟಿತು. ನನ್ನ ಕನಸುಗಳನ್ನು ಮದುವೆಯಾಗುವ ಹುಡುಗನಲ್ಲಿ ಹೇಳಿಕೊಂಡಾಗ ಆತ ಬೆಂಬಲಿಸಿದ್ದ. ಆದರೆ ಮದುವೆ ದಿನ ಹಾಗೂ ಪರೀಕ್ಷೆಯ ದಿನ ಒಂದೇ ದಿನಾಂಕದಂದು ನಿಗದಿಯಾಗಿರುತ್ತದೆ ಎಂದು ಯೋಚಿಸಿರಲಿಲ್ಲ. ಹೀಗಾಗಿ ಅಂದೇ ಪ್ರಾಯೋಗಿಕ ಪರೀಕ್ಷೆ ಬರೆಯಬೇಕಾಗಿ ಬಂತು ಎಂದು ಶ್ರೀ ಲಕ್ಷ್ಮಿ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಕಲ್ಲು ಹೊಡೆದ ದುಷ್ಕರ್ಮಿಗಳು; ಕಿಟಕಿ ಗಾಜುಗಳಿಗೆ ಹಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net