

ಪಿರಿಯಾಪಟ್ಟಣ: ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಲು ಕೆಂಪೇಗೌಡರ ದೂರದೃಷ್ಟಿಯ ಆಡಳಿತ ಕಾರಣವಾಗಿದೆ ಎಂದು ಪಿರಿಯಾಪಟ್ಟಣ ಸಾರಿಗೆ ಘಟಕದ ವ್ಯವಸ್ಥಾಪಕ ದರ್ಶನ್ ರಾಮಚಂದ್ ಹೇಳಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ರಾಜ್ಯದ ಬೆಳವಣಿಗೆಗೆ ಕೆಂಪೇಗೌಡರವರ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.
ಮಹನೀಯರ ಜಯಂತಿಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲರೂ ಸಮನ್ವಯತೆಯಿಂದ ಆಚರಿಸಿದಾಗ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಇದೇ ಸಂದರ್ಭ ಸಾರಿಗೆ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿಯಾದ ಸ್ವಾಮಿಗೌಡ, ಅಣ್ಣೇಗೌಡ ಹಾಗೂ ಪಾರುಪತ್ತೇಗಾರ ಗೋವಿಂದ್, ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ಸಂಚಾರ ನಿರೀಕ್ಷಕ ಪ್ರಕಾಶ್, ಪಾರುಪತ್ತೆಗಾರ ಜ್ಞಾನೇಶ್ವರ ರಾವ್, ಪ್ರಕಾಶ್, ಮೇಲ್ವಿಚಾರಕಿ ಭಾಗ್ಯಲಕ್ಷ್ಮೀಶೆಟ್ಟಿ, ಹವಾಲ್ದಾರ್ ಗವೀಶ್, ಸಹಾಯಕ ಸಂಚಾರ ನಿರೀಕ್ಷಕ ಸುರೇಶ್, ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಕಚೇರಿ ಮತ್ತು ಭದ್ರತಾ ಸಿಬ್ಬಂದಿ ಇದ್ದರು.