

ರಾಮನಗರ: ಕೆಂಪೇಗೌಡ ರಥಯಾತ್ರೆ ವೇಳೆ ಅವಘಡ ಸಂಭವಿಸಿದ್ದು, ಪೂಜಾ ಕುಣಿತ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ಮಾಗಡಿ ತಾಲೂಕಿನ ಮರೂರು ಗ್ರಾಮದಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಮಾಗಡಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ (21) ಮೃತರು.
ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನಲೆ ಮೃತ್ತಿಕೆ ಸಂಗ್ರಹ ಹಿನ್ನೆಲೆ ಕೆಂಪೇಗೌಡ ರಥಯಾತ್ರೆ ನಡೆಯುತ್ತಿತ್ತು. ರಥಯಾತ್ರೆಯಲ್ಲಿ ಕುಳಿತ್ತಿದ್ದ ಶ್ರೀನಿವಾಸ್ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.