ಕೆಲ್ಲೆಂಗೆರೆ ಕೃಷಿ ಪತ್ತಿನ ಸಂಘ ‘ಕೈ’ ವಶ

Published on

ಅರಸೀಕೆರೆ: ತಾಲೂಕಿನ ಕೆಲ್ಲೆಂಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ದಾಖಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಸಾಲಗಾರರಲ್ಲದ ಏಕೈಕ ಕ್ಷೇತ್ರದಿಂದ ಕುಮಾರ್, ಉಳಿದಂತೆ ಕುಮಾರಸ್ವಾಮಿ(ಬಿಸಿಎ), ಕೇಶವಪ್ರಸಾದ್, ಬಸವರಾಜು, ಯತೀಶ್ ಕುಮಾರ್, ಕೆ.ಎಸ್.ರಮೇಶ್, ರವಿಚಂದ್ರ(ಸಾಮಾನ್ಯ), ಯತೀಶ್(ಬಿಸಿಬಿ), ನೇತ್ರಾವತಿ, ಸರೋಜಮ್ಮ (ಸಾಮಾನ್ಯ ಮಹಿಳೆ), ಮಾಲತಿ(ಪ.ಪಂ), ಮೂಡಲಗಿರಿ(ಪ.ಜಾತಿ) ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಲೀಲಾವತಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net