ಪಕ್ಷಾತೀತ ಹೋರಾಟಕ್ಕೆ ಕರೆ ಕೊಟ್ಟ ಅರವಿಂದ ಕೇಜ್ರಿವಾಲ್​; ಒಳ್ಳೆಯ 'ಹವಾ' ಸೃಷ್ಟಿಯ ಉದ್ದೇಶ

Aravind Kejriwal 9 June 20
Published on

ನವದೆಹಲಿ: ದೆಹಲಿಯ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್​ ಇದೀಗ ಪಕ್ಷಾತೀತ ಹೋರಾಟಕ್ಕೆ ಕರೆ ನೀಡಿದ್ದಾರೆ. ತಮ್ಮ ಈ ಹೋರಾಟಕ್ಕೆ ಎಲ್ಲ ಪಕ್ಷಗಳು, ಎಲ್ಲ ಸರ್ಕಾರಗಳೂ ಸಾಥ್ ನೀಡಬೇಕು ಎಂಬುದಾಗಿ ಕೋರಿದ್ದಾರೆ.

ಅಂದಹಾಗೆ ಕೇಜ್ರಿವಾಲ್​ ಅವರ ಈ ಹೋರಾಟದ ಕರೆಯ ಹಿಂದೆ ಒಂದೊಳ್ಳೆಯ 'ಹವಾ' ಸೃಷ್ಟಿಸುವ ಉದ್ದೇಶವಿದೆ. ಅರ್ಥಾತ್​, ದೆಹಲಿಯಲ್ಲಿ ವಿಪರೀತ ಎನಿಸಿರುವ ಪರಿಸರ ಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಅವರು ಅವರು ಹೀಗೊಂದು ಕರೆ ನೀಡಿದ್ದಾರೆ.

ಎಲ್ಲ ಸರ್ಕಾರಗಳು ಮುಂದೆ ಬಂದು ವಾಯುಮಾಲಿನ್ಯದ ವಿರುದ್ಧ ಜಂಟಿಯಾಗಿ ಹೋರಾಡಬೇಕು. ಎಲ್ಲ ಸರ್ಕಾರಗಳು ಹಾಗೂ ಪಕ್ಷಗಳು ರಾಜಕೀಯ ಬಿಟ್ಟು ಒಗ್ಗೂಡಿ ಹೋರಾಟ ನಡೆಸಿದರೆ ನಾಲ್ಕು ವರ್ಷಗಳ ಒಳಗೆ ನಾವು ಮಾಲಿನ್ಯವನ್ನು ನಿಯಂತ್ರಿಸಬಹುದು ಎಂಬುದಾಗಿ ಕೇಜ್ರಿವಾಲ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net