

100% Tariffs: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಮೇಲೆ ಒತ್ತಡ ಹೇರಲು ನಿರ್ಧರಿಸಿದಂತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಚೀನಾದ ಮೇಲೆ ಶೇ 100ರಷ್ಟು ಸುಂಕ ವಿಧಿಸುವಂತೆ ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿ ಮತ್ತು ಯುರೋಪಿಯನ್ ಒಕ್ಕೂಟದ ರಾಜತಾಂತ್ರಿಕರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಆಸ್ತಿಗಾಗಿ ಮಹಿಳೆಯ ಭೀಕರ ಹತ್ಯೆ!
ಯುರೋಪಿಯನ್ ನಿಯೋಗವು ನಿರ್ಬಂಧಗಳ ಸಮನ್ವಯ ಮಾತುಕತೆಗಾಗಿ ವಾಷಿಂಗ್ಟನ್ನಲ್ಲಿದ್ದಾಗ, ನಿರ್ಬಂಧಗಳ ರಾಯಭಾರಿ ಡೇವಿಡ್ ಒ'ಸುಲ್ಲಿವನ್ ಮತ್ತು ಇತರ ಅಧಿಕಾರಿಗಳಿಗೆ ಕಾನ್ಫರೆನ್ಸ್ ಕರೆಯ ಮೂಲಕ ಈ ವಿನಂತಿಯನ್ನು ತಿಳಿಸಲಾಯಿತು ಎಂದು ವರದಿಯಾಗಿದೆ.
ಈ ವಿಷಯವಾಗಿ ನೇರವಾಗಿ ಮಾತನಾಡಿದ ಟ್ರಂಪ್, ತಮ್ಮ ಯೋಜನೆಯನ್ನು ಸ್ಪಷ್ಟವಾಗಿ ವಿವರಿಸಿದರು. ನಾವೆಲ್ಲರೂ ಸುಂಕಗಳನ್ನು ವಿಧಿಸೋಣ ಮತ್ತು ಚೀನಿಯರು ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪುವವರೆಗೆ ಸುಂಕಗಳನ್ನು ಮುಂದುವರಿಸೋಣ, ಬ್ರಸೆಲ್ಸ್ ಇದೇ ರೀತಿ ಸುಂಕ ವಿಧಿಸಿದರೆ, ತಾನು ಅದನ್ನೂ ಮುಂದುವರೆಸುವುದಾಗಿ ಅಮೆರಿಕಾ ಹೇಳಿದೆ.
ಚೀನಾ ಮತ್ತು ಭಾರತ ರಷ್ಯಾದ ತೈಲವನ್ನು ಅತಿ ಹೆಚ್ಚು ಖರೀದಿಸುವ ದೇಶಗಳಾಗಿದ್ದು, ಇದು ಉಕ್ರೇನ್ ಮೇಲಿನ ದಾಳಿಯನ್ನು ವಿಸ್ತರಿಸಲು ನೆರವಾಗುತ್ತಿದೆ ಎಂದರು. ಟ್ರಂಪ್ ಪದೇ ಪದೇ ಎರಡೂ ರಾಷ್ಟ್ರಗಳ ಖರೀದಿಗಳ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ಭಾರತದ ಮೇಲಿನ ಸುಂಕಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದ್ದಾರೆ.
ಇದಾದ ನಂತರ ವರಸೆ ಬದಲಿಸಿರುವ ಟ್ರಂಪ್, ಭಾರತದ ಕಡೆಗೆ ಹೆಚ್ಚು ಒಲವು ತೋರಿದ್ದಾರೆ, ಅಮೆರಿಕವು ವಾಸ್ತವವಾಗಿ ಭಾರತದೊಂದಿಗೆ ವ್ಯಾಪಾರವನ್ನು ಹೆಚ್ಚಿಗೆ ಮಾಡುವ ಸಾಧ್ಯತೆಯ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ, ಎರಡೂ ದೇಶಗಳು ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿವೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.(ಏಜೆನ್ಸೀಸ್)