

ನವದೆಹಲಿ: ಇಂಟರ್ನೆಟ್ ಜಗತ್ತಿನಲ್ಲಿ ಹಲವಾರು ವೀಡಿಯೊಗಳು ಪ್ರತಿದಿನ ವೈರಲ್ ಆಗುತ್ತಿವೆ. ಆದರೆ ಕೆಲವೊಮ್ಮೆ ಕೆಲವು ವೀಡಿಯೊಗಳು ನಮಗೆ ಆಸಕ್ತಿದಾಯಕ ಮಾಹಿತಿಯನ್ನು ಸಹ ನೀಡುತ್ತವೆ. ಸದ್ಯ ಇಂತಹದೊಂದು ವಿಡಿಯೋ ವೈರಲ್ ಆಗಿದ್ದು, ಫೋನ್‌ನಲ್ಲಿ ಹಣವನ್ನು ಇಡುವುದು ಎಷ್ಟು ಅಪಾಯಕಾರಿ ಎಂದು ಇದು ತಿಳಿಸುತ್ತಿದೆ.
ವಿಡಿಯೋದಲ್ಲಿ ಏನಿದೆ?: ವೈರಲ್ ಆದ ವಿಡಿಯೋದಲ್ಲಿ, ಫೋನ್ ಬಳಕೆ ಮಾಡುತ್ತಿದ್ದರೆ ನಮ್ಮ ಫೋನ್ ಬಿಸಿಯಾಗುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖವು ತುಂಬಾ ಅಪಾಯಕಾರಿ. ನೋಟುಗಳನ್ನು ತಯಾರಿಸಲು ಕಾಗದದ ಜತೆಗೆ ಅನೇಕ ರೀತಿಯ ರಾಸಾಯನಿಕಗಳನ್ನು ಸಹ ಬಳಸಲಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ಫೋನ್ ಸುಲಭವಾಗಿ ಬೆಂಕಿಯನ್ನು ಹಿಡಿಯಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಮೂರು ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ. ಈ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಫೋನ್ ಗೆ ಕವರ್ ಹಾಕೋದು ಬಹಳ ಮುಖ್ಯ: ಫೋನ್ ಸ್ಕ್ರೀನ್ ಹಾಗೂ ಕ್ಯಾಮರಾ ಹಾಳಾಗುವ ಸಾಧ್ಯತೆ ಇರುವ ಕಾರಣ ನೀವು ಕವರ್ ಹಾಕ್ಬೇಕು. ಆದ್ರೆ ಟೈಟ್ ಕವರ್ ಹಾಕ್ಬೇಡಿ. ನೀವು ಟೈಟ್ ಕವರ್ ಹಾಕಿದಾಗ ಫೋನ್ ನಿಂದ ಶಾಖ ಹೊರಗೆ ಬರೋದಿಲ್ಲ. ಈ ಸಮಯದಲ್ಲಿ ನಿಮ್ಮ ಫೋನ್ ಕವರ್ ಒಳಗೆ ನೋಟ್ ಇಟ್ಟರೆ ನೋಟ್ ಬೇಗ ಬಿಸಿಯಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ಫೋನ್‌ನಲ್ಲಿ ಬಿಗಿಯಾದ ಕವರ್‌ಗಳನ್ನು ಬಳಸಬಾರದು ಮತ್ತು ಕರೆನ್ಸಿ ನೋಟುಗಳನ್ನು ಫೋನ್ ಕವರ್‌ನಲ್ಲಿ ಇಡಬಾರದು ಎಂದು ತಜ್ಞರು ಸಲಹೆ ನೀಡುತ್ತಾ
ಫೋನಿನ ಕವರ್ ಹಿಂದೆ ಹಣ ಇಡುವ ಅಭ್ಯಾಸ ಇದ್ದರೆ ನೀವೂ ತಕ್ಷಣ ನಿಲ್ಲಿಸಿ. ಈ ಅಭ್ಯಾಸವು ನಿಮ್ಮ ಸಾವಿಗೆ ಕಾರಣವಾಗಬಹುದು. ಸದ್ಯ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನಂತರ ಯಾರಾದರೂ ಈ ಅಭ್ಯಾಸವನ್ನು ನಿಲ್ಲಿಸುವ ಪ್ರಯತ್ನ ಮಾಡಿ.