ಮತ್ತೊಮ್ಮೆ ಶಿಷ್ಟಾಚಾರ ಮರೆತ ತೆಲಂಗಾಣ ಸಿಎಂ: ರಾಜ್ಯಕ್ಕೆ ಪ್ರಧಾನಿ ಆಗಮಿಸಿದರೂ ಸ್ವಾಗತಕ್ಕೆ ಬಾರದ ಕೆಸಿಆರ್​!

Modi
Published on

ಹೈದರಾಬಾದ್​: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು ಕೂಡ ಮುಖ್ಯಮಂತ್ರಿಯಾಗಿ ಅವರನ್ನು ಸ್ವಾಗತಿಸಲು ಮಾತ್ರ ತೆಲಂಗಾಣ ಮುಖ್ಯಮಂತ್ರಿ ಬಾರದೇ ಮತ್ತೊಮ್ಮೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಕಾಲ ತೆಲಂಗಾಣ ಪ್ರವಾಸ ಕೈಗೊಂಡಿರುವ ಪ್ರಧಾನಿ ಶನಿವಾರ ದೆಹಲಿಯಿಂದ ಆಗಮಿಸಿದ್ದಾರೆ.ಆದರೆ ಈ ವೇಳೆಯೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಗೈರಾಗಿದ್ದರು. ಅವರ ಬದಲಾಗಿ ಸಚಿವರು ಪ್ರಧಾನಿ ಅವರನ್ನು ಸ್ವಾಗತಿಸಿದರು.

ಪ್ರಧಾನಿ ಆಗಮನಕ್ಕೂ ಕೆಲವೇ ಗಂಟೆಗಳ ಮುನ್ನ ಕಾಂಗ್ರೆಸ್​ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್​ ಸಿನ್ಹಾ ಅವರನ್ನು ಸ್ವಾಗತಿಸಲು ಕೆಸಿಆರ್​ ಇದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಪ್ರಧಾನಿ ಆಗಮನದ ವೇಳೆ ಬಂದಿರಲಿಲ್ಲ.

ಕೈ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್​ ಸಿನ್ಹಾ ಅವರಿಗೆ ಬೆಂಬಲ ಸೂಚಿಸಿರುವುದರಿಂದಲೇ ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಆಗಮಿಸಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಆರು ತಿಂಗಳಲ್ಲಿ ಇದು ಮೂರನೇ ಬಾರಿ ಕೆಸಿಆರ್​ ಅವರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. (ಏಜೆನ್ಸೀಸ್​) ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net