

KCET Results 2025: ವಿದ್ಯಾರ್ಥಿಗಳ ಕಾತರಕ್ಕೆ ಕಡೆಗೂ ತೆರೆ ಬಿದ್ದಿದ್ದು, 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನೋಡಲು ಲಭ್ಯವಾಗಲಿದೆ.
ಇಂದು 11 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಭಾಗಿಯಾಗಿ, ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 3.30 ಲಕ್ಷ ವಿದ್ಯಾರ್ಥಿಗಳ ಪೈಕಿ 3,11,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸಚಿವರು ತಿಳಿಸಿದರು.
1. ಭವೇಶ್ ಜಯಂತಿ - ಬೆಂಗಳೂರಿನ ಮಾರತಹಳ್ಳಿಯ ಚೈತನ್ಯ ಸಿಬಿಎಸ್ಇ ಶಾಲೆ
2. ಸಾತ್ವಿಕ್ ಬಿರಾದರ್- ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ
3. ದಿನೇಶ್ ಗೋಮತಿ ಶಂಕರ್ ಅರುಣಾಚಲಂ - ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ, ಬೆಂಗಳೂರು
1. ಅಕ್ಷಯ್ ಎಂ- ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರಿ
2. ಸಾಯಿಶ್ ಶರವಣ ಪಂಡಿತ್- ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
3. ಸುಚಿತ್. ಪಿ- ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
1. ಕೀರ್ತನ ಎಂ.ಎಲ್- ಶಾರದಾಂಬ ಕಾಲೇಜು, ತುಮಕೂರು
2. ರಕ್ಷಿತಾ ವಿ.ಪಿ- ಎಚ್ಎಂಆರ್ ಪಿಯು ಕಾಲೇಜು ಕಲ್ಯಾಣ್ನಗರ, ಬೆಂಗಳೂರು
3. ಅಶ್ವಿನಿ ಎಕ್ಕುಂಡಿ- ಎಕ್ಸ್ಲೆಂಟ್ ಸೈನ್ಸ್ ಪಿಯು ಕಾಲೇಜು, ಅಥಣಿ ರಸ್ತೆ, ವಿಜಯಪುರ
1. ಹರೀಶ್ ರಾಜ್- ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜು
2. ಆತ್ರೇಯ- ಹೆಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್ ಸ್ಕೂಲ್
3. ಶಾಪಲ್ ಶೆಟ್ಟಿ - ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜು
1. ಆತ್ರೇಯ ವೆಂಕಟಚಲಂ
2. ಭವೇಶ್ ಜಯಂತಿ
3. ಹರೀಶ್ ರಾಜ್ ಡಿ.ವಿ
1. ರಕ್ಷಿತಾ .ವಿ.ಪಿ - ಹೆಚ್ಎಂಆರ್ ನ್ಯಾಷನಲ್ ಪಿಯು ಕಾಲೇಜು, ಕಲ್ಯಾಣ್ನಗರ, ಬೆಂಗಳೂರು
2. ನಂದನ್ - ಆರ್ಕೆ ವಿಷನ್ ಪಿಯು ಕಾಲೇಜು, ಚಿಂತಾಮಣಿ
3. ಭುವನೇಶ್ವರಿ- ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು, ಲಿಂಗಸೂರು, ರಾಯಚೂರು