

ರಾಣೆಬೆನ್ನೂರ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಹಾಗೂ ಸ್ಥಳೀಯ ನಿವಾಸಿ ಮಹೇಶ ಎಸ್. ನಾಜರೆ ಅವರಿಗೆ ಕವಿವಿ ಪಿಎಚ್.ಡಿ ಹಾಗೂ ಪ್ರೋ. ಜೆ. ಸೀತಾರಾಮಪ್ಪ ಗೋಲ್ಡ್ ಮೆಡಲ್ ಫಾರ್ ಬೆಸ್ಟ್ ಥೀಸಿಸ್ ಇನ್ ಕೆಮಿಸ್ಟ್ರಿ-2022 ಪ್ರಶಸ್ತಿ ಪ್ರದಾನ ಮಾಡಿದೆ.
ಇವರು ಮಂಡಿಸಿದ ‘ಸ್ಟಡೀಸ್ ಆನ್ ಸಿಂಥೆಸಿಸ್, ಕ್ಯಾರೆಕ್ಟರೈಜೇಷನ್ ಆ್ಯಂಡ್ ಆಪ್ಟೊಎಲೆಕ್ಟ್ರಾನಿಕ್ ಪ್ರಾಪರ್ಟೀಸ್ ಆಫ್ ನೊವೇಲ್ ಹೆಟೆರೊಸೈಕ್ಲಿಕ್ ಕಂಪೌಂಡ್ಸ್ ಕಂಟೇನಿಂಗ್ ಆಕ್ಸಿಜನ್ ಆ್ಯಂಡ್ ನೈಟ್ರೋಜನ್’ ಎಂಬ ಪ್ರಬಂಧ ಮಂಡಿಸಿದ್ದರು. ಕವಿವಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ದಿ. ಡಾ. ಐ.ಎಂ. ಖಾಜಿ ಮತ್ತು ಸಹ ಪ್ರಾಧ್ಯಾಪಕ ಡಾ. ಎಲ್.ಎ. ಶಾಸ್ತ್ರಿ ಮಾರ್ಗದರ್ಶನ ಮಾಡಿದ್ದರು.