ಜ್ಞಾನದ ಬೆಳಕು ನೀಡಿದೆ ಕವಿತಾಳದ ಕಲ್ಮಠ

17.ktal.01
ಕವಿತಾಳ ಕಲ್ಮಠದ ನೂತನ ಪೀಠಾಧಿಪತಿ ಅಭಿನವ ಸಿದ್ದಲಿಂಗಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ಶುಕ್ರವಾರ ನಡೆಯಿತು. ಮಡಿಯಾಳ ಒಪ್ಪತೇಶ್ವರ ವಿರಕ್ತ ಮಠದ ಮರಳಸಿದ್ದ ಸ್ವಾಮೀಜಿ, ಲಾಡಮಾಳಗಿ ವಿರಕ್ತಮಠದ ಶಿವಲಿಂಗ ಸ್ವಾಮಿಗಳು, ಬಳಗಾನೂರು ಸಿದ್ದಬಸವ ಸ್ವಾಮಿಗಳು, ಒಳಬಳ್ಳಾರಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು, ಕಡಗಂಚಿ ವೀರಭದ್ರ ಶಿವಚಾರ್ಯರು, ಕಡಬಗಾಂವ ಚಿದಾನಂದ ಸ್ವಾಮಿಗಳು, ಉಟಕನೂರು ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಇದ್ದರು.
Published on

ಕವಿತಾಳ: ಪಟ್ಟಣದ ಕಲ್ಮಠ ನೂತನ ಪೀಠಾಧಿಪತಿ ಅಭಿನವ ಸಿದ್ದಲಿಂಗ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಶುಕ್ರವಾರ ಸಡಗರದಿಂದ ನಡೆಯಿತು.


ಹಿರೇನಾಗಾಂವ ಜಯಲಿಂಗ ಸ್ವಾಮೀಜಿ ನೂತನ ಪೀಠಾಧಿಪತಿಗಳನ್ನು ಬರಮಾಡಿಕೊಂಡರು. ಅಭಿನವ ಸಿದ್ದಲಿಂಗ ಸ್ವಾಮಿಗಳಿಗೆ ಚಿನ್ಮಯಾನುಗ್ರಹ ಮತ್ತು ಷಟಸ್ಥಲ ಬ್ರಹ್ಮೋಪದೇಶ ದಿಕ್ಷೆಯ ಅನುಗ್ರಹವನ್ನು ಸಿದ್ದಲಿಂಗ ಸ್ವಾಮಿಗಳು ನೆರವೇರಿಸಿದರು. ಯೋಗೀಶ್ವರ ಸ್ವಾಮೀಜಿ ಅವರನ್ನು ಕಲ್ಮಠದ ಪೀಠಾಧಿಪತಿಯಾಗಿ ಅಭಿನವ ಸಿದ್ದಲಿಂಗಸ್ವಾಮಿಗಳು ಎಂಬ ನಾಮದಿಂದ ಕರೆಯಲಾಗುವದು ಎಂದು ಸಿದ್ದಲಿಂಗ ಸ್ವಾಮಿಗಳು ತಿಳಿಸಿದರು.


ಕಲ್ಮಠವು ನಾಡಿಗೆ ಜ್ಞಾನದ ಬೆಳಕನ್ನು ನೀಡಿದ್ದು, ಅಭಿನವ ಸಿದ್ದಲಿಂಗ ಸ್ವಾಮಿಗಳು ತೋರಿಸುವ ಮಾರ್ಗದಲ್ಲಿ ಭಕ್ತರು ಧರ್ಮದ ಕಾರ್ಯವನ್ನು ನಡೆಸಬೇಕು ಎಂದರು. ವಿವಿಧ ಮಠಾಧಿಶರು ನೂತನ ಪೀಠಾಧಿಪತಿಗಳನ್ನು ಗೌರವಿಸಿದರು. ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net