ಕಾವೇರಿ ನಮ್ಮ ತಾಯಿ ಇದ್ದಂತೆ: ದೊಡ್ಡಣ್ಣ

film actor Doddanna
ಹಿರಿಯ ನಟ ಎಸ್.ದೊಡ್ಡಣ್ಣ
Published on

ಶಿವಮೊಗ್ಗ: ಕಾವೇರಿ ನದಿ ನಮ್ಮ ಜೀವ ನದಿ. ತಾಯಿ ಇದ್ದಂತೆ ಎಂದು ಹಿರಿಯ ನಟ ಎಸ್.ದೊಡ್ಡಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ತಾವೂ ಬದ್ಧ. ಈ ವಿಚಾರದಲ್ಲಿ ದೊಡ್ಡವರು ಪ್ರವೇಶ ಮಾಡಬೇಕು. ಎರಡು ರಾಜ್ಯಗಳ ನಡುವೆ ಜಗಳ ಮಾಡುವುದಕ್ಕೆ ಬಿಟ್ಟು ಸುಮ್ಮನಿರುವುದು ಒಳ್ಳೆಯದಲ್ಲ ಎಂದರು.
ಕಾವೇರಿ ನೀರಿನ ವಿಚಾರದಲ್ಲಿ ವೈಯಕ್ತಿಯವಾಗಿ ಎಲ್ಲಿಗೆ ಕರೆದರೂ ನಾನು ಬರುತ್ತೇನೆ. ಹೋರಾಟ ಮಾಡುತ್ತೇನೆ. ಆದರೆ ನಾನೋಬ್ಬನೇ ಹೋರಾಟ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net