ಕತ್ರಿನಾ ಕೈಫ್ ಗರ್ಭಿಣಿಯಲ್ಲ, ಲಂಡನ್‌ಗೆ ಹೋಗಲು ಕಾರಣವೇ ಬೇರೆ ಇದೆ..ಪ್ರೆಗ್ನೆನ್ಸಿ ವದಂತಿಗೆ ಬಿತ್ತು ಬ್ರೇಕ್​

Katrina Kaif
Published on

ಮುಂಬೈ: ಬಾಲಿವುಡ್​ ನಟಿ ಕತ್ರಿನಾ ಕೈಫ್​​ ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದ ಈ ಚೆಲುವೆ ಈಗ ರೀ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಇನ್ನಿಂಗ್ಸ್ ಕೂಡ ಸಾಲು ಸಾಲು ಚಿತ್ರಗಳಲ್ಲಿ ತೊಡಗಿ ಕೊಂಡಿದ್ದಾರೆ. ಆದರೆ ಈ ನಡುವೆ ನಟಿ ಪ್ರೆಗ್ನೆಂಟ್​​ ಎಂದು ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಫೋಟೋಗಳ ಜತೆ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಸುದ್ದಿಯ ಕುರಿತಾಗಿ ಬ್ರೇಕ್​ ಬಿದ್ದಿದೆ.

ಕೆಲ ದಿನಗಳಿಂದ ಕತ್ರಿನಾ ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿಕಿತ್ಸೆಗಾಗಿಯೇ ಆಕೆ ಲಂಡನ್‌ಗೆ ಹೋಗಿದ್ದಾಳೆ ಎಂದು ಚಿತ್ರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ಸುದ್ದಿಗೆ ಕತ್ರಿನಾ ಕೈಫ್ ತಂಡ ಪ್ರತಿಕ್ರಿಯಿಸಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿದುಬಂದಿದೆ. ಕತ್ರಿನಾ ಕೈಫ್ ಗರ್ಭಿಣಿಯಲ್ಲ ಎಂದು ವರದಿಯಾಗಿದೆ.. ಅವರು ವೈಯಕ್ತಿಕ ಕೆಲಸದ ನಿಮಿತ್ತ ಲಂಡನ್‌ಗೆ ತೆರಳಿದ್ದರು. ಈ ಬಗ್ಗೆ ಕತ್ರಿನಾ ಕೈಫ್ ತಂಡ ಸ್ಪಷ್ಟನೆ ನೀಡಿದೆ. ಆದರೆ ಈ ಸುದ್ದಿಗೆ ಕತ್ರಿನಾ ಮತ್ತು ವಿಕ್ಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕತ್ರಿನಾ ತನ್ನ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಕತ್ರಿನಾ ಕೈಫ್ 2021 ರಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಮದುವೆಯಾದ ನಂತರ ಕೆಲ ವರ್ಷ ಸುಮ್ಮನಿದ್ದ ಕತ್ರಿನಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯ್ ಸೇತುಪತಿ ಅಭಿನಯದ ಮೆರ್ರಿ ಕ್ರಿಸ್ಮಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಕತ್ರಿನಾ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ.

Katrina Kaif
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net