ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

Silent Suneel
ಸೈಲೆಂಟ್ ಸುನೀಲ್
Published on

ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿಯ ಪ್ರಮುಖ ನಾಯಕರ ಜತೆ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಕಾಣಿಸಿಕೊಂಡ ವಿಚಾರವಾಗಿ ಇತ್ತೀಚೆಗೆ ವಿವಾದ ಉಂಟಾಗಿತ್ತು. ಮಾತ್ರವಲ್ಲ, ಆತ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನಿಸುತ್ತಿರುವುದು ಕೂಡ ಬೆಳಕಿಗೆ ಬಂದಿತ್ತು.

ಆದರೆ ಇದೀಗ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್, ನಿವೃತ್ತ ಐಪಿಎಸ್​ ಅಧಿಕಾರಿ ಭಾಸ್ಕರ್ ರಾವ್ ಅವರ ಪಾಲಾಗಿದೆ. ಈ ವಿಷಯ ಪ್ರಕಟಗೊಂಡು ಟಿಕೆಟ್ ಕೈತಪ್ಪಿರುವುದು ಖಚಿತವಾಗುತ್ತಿದ್ದಂತೆ ಸೈಲೆಂಟ್ ಸುನೀಲ್ ಬೆಂಬಲಿಗರು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದೂ ನಡೆದಿದೆ. ಪಕ್ಷಕ್ಕಾಗಿ ದುಡಿದಿದ್ದ ಸುನಿಲ್​ಗೆ ಟಿಕೆಟ್ ಯಾಕೆ ನೀಡಿಲ್ಲ ಎಂದು ಆತನ ಬೆಂಬಲಿಗರು ಈ ಸಂದರ್ಭದಲ್ಲಿ ಪ್ರಶ್ನಿಸಿ ಗದ್ದಲ ಎಬ್ಬಿಸಿದ್ದರು.

ಇಂದು ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜಪೇಟೆ ಟಿಕೆಟ್ ಕುರಿತು ಬಿಜೆಪಿ ಕಚೇರಿಯಲ್ಲಿ ಸೈಲೆಂಟ್ ರವಿ ಬೆಂಬಲಿಗರ ಪ್ರತಿಭಟನೆ ವಿಚಾರವಾಗಿ ಇಂದು ಮಾಧ್ಯಮದವರ ಜತೆ ಮಾತನಾಡಿರುವ ರಾಜ್ಯಾಧ್ಯಕ್ಷರು, ಸುನೀಲ್ ನಮ್ಮ ಪಾರ್ಟಿಯ ಸದಸ್ಯನೇ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸಿದವರಿಗೂ ಅದನ್ನೇ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net