

ಬೆಂಗಳೂರು ಪ್ರಶ್ನೆಪತ್ರಿಕೆಗಳಲ್ಲಿನ ಭಾಷಾಂತರದಲ್ಲಿ ಲೋಪವಾಗಿದ್ದ ಕಾರಣ ಮುಂದೂಡಿದ್ದ ಕೆಎಎಸ್ ಪ್ರಿಲಿಮ್ಸ್ ಮರು ಪರೀಕ್ಷೆಯು ಭಾನುವಾರ (ಡಿ.29) ನಡೆಯಲಿದೆ.
ಈ ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗವು ಎಲ್ಲ ರೀತಿಯಿಂದಲೂ ಸಜ್ಜಾಗಿದೆ. ಕಳೆದ ಆಗಸ್ಟ್ 27ರಂದು ನಡೆದಿದ್ದ ಪರೀಕ್ಷೆಗೆ ಒಟ್ಟು 2,10,916 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್‌ನಲ್ಲಿನ ಪರೀಕ್ಷೆಗೆ 1,31,885 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 79,031 ಅಭ್ಯರ್ಥಿಗಳು ಗೈರಾಗಿದ್ದರು. ರಾಜ್ಯಾದ್ಯಂತ ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಆದರೆ, 60 ಪ್ರಶ್ನೆಗಳನ್ನು ತಪ್ಪಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಲಾಗಿತ್ತು. ಇದರಿಂದ ರಾಜ್ಯದ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದ ಪರಿಣಾಮ, ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಪರೀಕ್ಷೆ ನಡೆಸುವುದಾಗಿ ೋಷಿಸಿದ್ದರು.
ಪರೀಕ್ಷೆ ನಡೆಸದಂತೆ ಅಭ್ಯರ್ಥಿಯೊಬ್ಬರು ಹೈಕೋರ್ಟ್‌ನಲ್ಲಿಯೂ ಧಾವೆ ಹೂಡಿದ್ದರು. ಡಿ.9ರಂದು ಮರು ಪರೀಕ್ಷೆಗಿದ್ದ ತಡೆಯಾಜ್ಞೆ ವಿಚಾರಣೆ ನಡೆಸಿ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು.
ಅದರಂತೆ, 2023-24ನೇ ಸಾಳಿನ ಗೆಜೆಟೆಡ್ ಪ್ರೊಬೇಷನರಿ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳಿಗೆ ಪೂರ್ವಭಾವಿ ಮರು ಪರೀಕ್ಷೆ ನಡೆಯಲಿದೆ. ಭಾನುವಾರ ಬೆಳಗ್ಗೆ 10ರಿಂದ 12ರವರೆಎ ಪತ್ರಿಕೆ-1 ಮತ್ತು 2ರಿಂದ 4 ಗಂಟೆಯವರೆಗೆ ಪತ್ರಿಕೆ-2 ನಡೆಯಲಿದೆ.
ಈಗಾಗಲೇ ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಠಿಠಿ://ಠ್ಚ.ಚ್ಟ.್ಞಜ್ಚಿ.ಜ್ಞಿ/ ಪ್ರಕಟಿಸಲಾಗಿದೆ. ರಾಜ್ಯದ 553 ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.