ಕೆಎಎಸ್ ಪ್ರಿಲಿಮ್ಸ್ ಕನ್ನಡ ಅಧ್ವಾನ, 3 ದಿನಗಳಲ್ಲಿ ವರದಿ ನೀಡುವಂತೆ ನೋಟಿಸ್

Kannada
Published on

ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲಿನ ಕನ್ನಡ ಅಧ್ವಾನವನ್ನು ನೋಡಿ ಗರಂ ಆಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಪಿಎಸ್ಸಿಗೆ ಪತ್ರ ಬರೆದಿದ್ದು, ದೋಷಗಳಿಗೆ ಕಾರಣವೇನೆಂದು ಮುಂದಿನ ಮೂರು ದಿನದೊಳಗೆ ವರದಿ ನೀಡುವಂತೆ ನೋಟಿಸ್ ನೋಡಿದೆ.

ಸರ್ಕಾರವೇ ಕನ್ನಡದ ಕತ್ತು ಹಿಸುಕುವಂತಹ ಕೆಲಸ ಮಾಡುತ್ತಿದೆ. ಆದ್ದರಿಂದ ಕೆಪಿಎಸ್ಸಿ ನೀಡುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪರಿಹಾರಕ್ಕಾಗಿ ಆಗ್ರಹಿಸಲಾಗುವುದು. ಅದಕ್ಕೂ ಮೊದಲು ಕೆಪಿಎಸ್ಸಿ ಯಾವ ಉತ್ತರ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಬಾರಿ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಪತ್ರಿಕೆಯನ್ನು ಏಕೆ ನೋಡಬೇಕು. ಕನ್ನಡಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಬಳಸಿಕೊಂಡು ಕನ್ನಡದಲ್ಲಿಯೇ ಪ್ರಶ್ನೆಪತ್ರಿಕೆ ರಚಿಸಿ ಇಂಗ್ಲಿಷ್‌ಗೆ ತರ್ಜುಮೆ ಮಾಡಲಿ. ಕೆಪಿಎಸ್ಸಿಯೇ ಏಕೆ ಪರೀಕ್ಷೆಗಳನ್ನು ನಡೆಸಬೇಕು ಏಜೆನ್ಸಿಯೊಂದಕ್ಕೆ ನೀಡಿ ಮಾಡಿಸಲಿ.- ಪ್ರೊ. ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net