

ಬೆಂಗಳೂರು ಕೆಎಎಸ್ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಗೂಗಲ್ನಲ್ಲಿ ಅನುವಾದ ಮಾಡಿಸುವ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ? ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದಲಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯ..ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರ್ೂ ಮಾಡುವ ಅಭ್ಯಾಸ/ವ್ಯವಸ್ಥೆ ಇಲ್ಲವೇ? ಕನ್ನಡ ಮಾಧ್ಯಮದಲ್ಲಿ ಓದಿ ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮೋಸವಾಗಿದೆ ಮತ್ತು ನಷ್ಟವಾಗಿದೆ, ಇದಕ್ಕೆ ಪರಿಹಾರವೇನು ಎಂದು ಆಯೋಗವನ್ನು ಪ್ರಶ್ನೆ ಮಾಡಿದ್ದಾರೆ.