

ರಾಣೆಬೆನ್ನೂರ: ತಾಲೂಕಿನ ಕರೂರ ಗ್ರಾಮದಲ್ಲಿ ಭಾನುವಾರ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಗ್ರಾಮದ ತುಳುಜಾ ಭವಾನಿ ದೇವಸ್ಥಾನದ ಮುಂಭಾಗದಲ್ಲಿ ಗ್ರಾಪಂ ಅಧ್ಯೆ ಲಲಿಲವ್ವ ಹಿರೇಬಿದರಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಇಲ್ಲಿಂದ ಆರಂಭಗೊಂಡ ಶ್ರೀ ಬೀರಲಿಂಗೇಶ್ವರ, ಮೈಲಾರ ಲಿಂಗೇಶ್ವರ, ಆಂಜನೇಯ ಸ್ವಾಮಿ ಹಾಗೂ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಗ್ರಾಮದ ಬಸವೇಶ್ವರ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಂಜೆ ಬನ್ನಿ ಮುಡಿದ ನಂತರ ಗ್ರಾಮಸ್ಥರು ಪರಸ್ಪರ ಬನ್ನಿ ಕೊಟ್ಟು ನಾವು ನೀವು ಬಂಗಾರದಂಗ ಇರೋಣ ಎಂದು ಶುಭ ಹಾರೈಯಿಸಿದರು. ಗೊಂಬೆ ಕುಣಿತ, ನಂದಿ ಕೋಲು, ಹಲಗೆ ಮೇಳ, ಡೊಳ್ಳು ಕುಣಿತ, ಗೊರವರ ಕುಣಿತ, ಜೊಗಮ್ಮರು, ದಾಸಪ್ಪನವರು ಜೊಗಪ್ಪರು ಮೆರವಣಿಗೆಗೆ ಮೆರಗು ನೀಡಿದರು.
ಮೈಲಾರ ಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗೊರವಪ್ಪರು ಬರಿ ಕೈಯಿಂದ ಕಬ್ಬಿಣದ ಸರಪಳಿ ಹರಿದು ಭಕ್ತಿ ಪ್ರದಶಿರ್ಸಿದರು. ನಂತರ ಪ್ರಸಾದ ವಿತರಣೆ ನಡೆಯಿತು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಸುಭಾಸ ಸೂರ್ವೇ, ಪ್ರಮುಖರಾದ ಪ್ರಕಾಶ ಹೊರಕೇರಿ, ಕುರುವತ್ತೇಪ್ಪ ಬಣಕಾರ, ಹನುಮಂತಶೆಟ್ಟಿ ಎಚ್.ಆರ್., ಮಲ್ಲಪ್ಪ ಔತಾಡಿ, ಕರಿಯಪ್ಪ ಕಚಿರ್, ಕುಮಾರ ಕುದರಿ, ವಾಗೀಶ ಶಾಸ್ತ್ರೀ, ಕೆಂಚಪ್ಪ ಸೂರ್ವೇ, ಮಾಲತೇಶ ಮಣಕೂರ, ಬಸವರಾಜಪ್ಪ ಹಳ್ಳೇರ ಮತ್ತಿತರರು ಪಾಲ್ಗೊಂಡಿದ್ದರು.