

ಆನಂದಪುರ: ಮುರುಘಾ ಮಠದ ಈ ವರ್ಷದ ಐತಿಹಾಸಿಕ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಠದ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಂಗಳಾವಾರ ಬಿಡುಗಡೆ ಮಾಡಲಾಯಿತು. ಡಿ.1ರಂದು ಬೆಳಗ್ಗೆ ಶಿವಾನುಭವಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ, ಸಂಜೆ ಭಾವೈಕ್ಯ ಸಮ್ಮೇಳನ, ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ, ರಾತ್ರಿ ಐತಿಹಾಸಿಕ ಕಂಚಿನ ದೀಪ ರಥೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಕಾರ್ತಿಕ ದೀಪೋತ್ಸವ ಸಮಿತಿ ಅಧ್ಯಕ್ಷರಾಗಿ ಜ್ಞಾನೇಶ್ವರ, ಕಾರ್ಯದರ್ಶಿಯಾಗಿ ಬೇಸೂರು ಗಿರೀಶ, ನಾಗರಾಜ್ ಹರತಾಳು, ಜಯಶೀಲಪ್ಪ ಗೌಡ, ದೇವೇಂದ್ರಪ್ಪ, ಮುರುಗೇಂದ್ರಪ್ಪ ಗೌಡ, ಶಿವಕುಮಾರ್ ಮತ್ತಿತರರು ಸರ್ವಾನುಮತದಿಂದ ಆಯ್ಕೆಯಾದರು.