ಕಾರ್ತಿಕ ಪೂಜಾ ಮಹೋತ್ಸವ ಇಂದು

Published on

ಕಂಪಲಾಪುರ: ಇಲ್ಲಿನ ಶ್ರೀ ಕರಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಪೂಜಾ ಮಹೋತ್ಸವ ಡಿ.11ರಂದು ನೆರವೇರಲಿದೆ.

ಬೆಳಗಿನ ಜಾವ 5 ರಿಂದ ದೇವರಿಗೆ ಅಭಿಷೇಕ, ನೈವೇದ್ಯ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಮಂಜು ಮ್ಯೂಸಿಕ್ ತಂಡದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ ದೇವಸ್ಥಾನದ ಒಳಗೆ, ಹೊರಗೆ ದೀಪೋತ್ಸವ ಇದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ತಗೊಳ್ಳಬೇಕೆಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net