ಫ್ಯಾಷನ್ ಡಿಸೈನರ್ ಜತೆ ಪ್ರೀತಿಯನ್ನು ಅಧಿಕೃತಗೊಳಿಸಿದ ನಟ ಜೆಕೆ

karthikjayaram
Published on

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್‌ ಸಿನಿಮಾ ಹಾಗೂ ಕ್ರಿಕೆಟ್​​ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮದುವೆ ವಿಚಾರವಾಗಿ ಮತ್ತೇ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜೆಕೆಗೆ ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ಮಾಡಿದ್ದಾರೆ. ಈ ಮೂಲಕ ಅಪರ್ಣ ಮತ್ತು ಜೆಕೆ ಇಬ್ಬರ ಪ್ರೀತಿ ವಿಚಾರವನ್ನು ಅಧಿಕೃತ ಗೊಳಿಸಿದ್ದಾರೆ.

'ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು. ಅತ್ಯಂತ ಪ್ರೀತಿಯ ಗೆಳೆಯ ಮತ್ತು ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲಾ ಹಂತಗಳು ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ' ಎಂದು ಹೇಳಿದ್ದಾರೆ. ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಜೆಕೆ ಮದುವೆಯಾಗುತ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಾ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net